Home ಸುದ್ದಿ ರಾಷ್ಟ್ರೀಯ ಕೆಎಸ್‍ಆರ್‍ಟಿಸಿಗೆ ಪ್ರತಿಷ್ಠಿತ ವಲ್ರ್ಡ್ ಎಚ್‍ಆರ್‍ಡಿ ಕಾಂಗ್ರೆಸ್ ಪ್ರಶಸ್ತಿ

ಕೆಎಸ್‍ಆರ್‍ಟಿಸಿಗೆ ಪ್ರತಿಷ್ಠಿತ ವಲ್ರ್ಡ್ ಎಚ್‍ಆರ್‍ಡಿ ಕಾಂಗ್ರೆಸ್ ಪ್ರಶಸ್ತಿ

ಕೊಚ್ಚಿನ್, ಮಾ.31: ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ) ತನ್ನ ಉತ್ತಮ ತರಬೇತಿ ಕಾರ್ಯಕ್ರಮಗಳಿಗಾಗಿ ಪ್ರತಿಷ್ಠಿತ World HRD Congress Award-2026 -2026 ಪ್ರಶಸ್ತಿಗೆ ಭಾಜನವಾಗಿದೆ. Best in Training and Organisation Developmentವಿಭಾಗದಲ್ಲಿ Best in Class Training and Development” ಪ್ರಶಸ್ತಿಯನ್ನು ನಿಗಮಕ್ಕೆ ನೀಡಲಾಗಿದೆ.

ನಿಗಮದ ವ್ಯಾಪ್ತಿಯಲ್ಲಿರುವ ಐದು ತರಬೇತಿ ಕೇಂದ್ರಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 12,000ಕ್ಕೂ ಹೆಚ್ಚು ಸಿಬ್ಬಂದಿಗೆ ವಿವಿಧ ಮಾದರಿಯ ತರಬೇತಿಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದನ್ನು ಪರಿಗಣಿಸಿ ಈ ಗೌರವ ದೊರೆತಿದೆ. ಇಂಧನ ಕ್ಷಮತೆ, ಅಪಘಾತರಹಿತ ಚಾಲನೆ, ರಸ್ತೆ ಸುರಕ್ಷತೆ, ಸಿಮ್ಯುಲೇಟರ್ ತರಬೇತಿ, ಪುನಶ್ಚೇತನ ಕಾರ್ಯಕ್ರಮಗಳು ಸೇರಿದಂತೆ ಹಲವು ತರಬೇತಿ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ.

ಇದಲ್ಲದೆ, ಪಿ.ಎಂ. ಅಜಯ್ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ಮತ್ತು ಉಚಿತ ಚಾಲನಾ ಪರವಾನಗಿ ವಿತರಣೆ, ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ತರಬೇತಿ ನೀಡುವುದು, ಹೊಸದಾಗಿ ಆಯ್ಕೆಯಾದ ಚಾಲಕ-ಕಂ-ನಿರ್ವಾಹಕರು, ಕಿರಿಯ ಸಹಾಯಕರು ಮತ್ತು ಮೇಲ್ವಿಚಾರಕ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುವಂತಹ ಹಲವು ಸಾಮಾಜಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳನ್ನೂ ನಿಗಮ ಯಶಸ್ವಿಯಾಗಿ ಹಮ್ಮಿಕೊಂಡಿದೆ.

ಕೊಚ್ಚಿನ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ಯಾಪ್ಟನ್ ಎಸ್.ಟಿ. ಶ್ರೀಧರನ್, ನಿರ್ದೇಶಕರು, ಕಾಲೇಜ್ ಆಫ್ ಶಿಪ್ ಟೆಕ್ನಾಲಜಿ ಅವರು ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಪರವಾಗಿ ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಮತ್ತು ಹಾಸನ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ಎ.ಎಸ್. ಗೀತಾಂಜಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಪ್ರಶಸ್ತಿ ನಿಗಮದ ತರಬೇತಿ ಗುಣಮಟ್ಟ ಮತ್ತು ಸಂಸ್ಥಾ ಅಭಿವೃದ್ಧಿಯಲ್ಲಿ ಸಾಧಿಸಿರುವ ಮಹತ್ವದ ಪ್ರಗತಿಗೆ ಮತ್ತೊಂದು ಮೈಲುಗಲ್ಲಾಗಿದೆ.