ಕೆಂಪು ಕಲ್ಲು ಸಾಗಾಟ ನಿಷೇಧದಿಂದ ಲಾರಿಯ ಸಾಲಬಾಕಿ: ಫೈನಾನ್ಸ್ ನವರ ಕಿರುಕುಳಕ್ಕೆ ಲಾರಿ ಮಾಲಕ ಆತ್ಮಹತ್ಯೆ ಯತ್ನ

ಸುಳ್ಯ:ಸರಕಾರ ಕೆಂಪು ಕಲ್ಲು ನಿಷೇಧ ಮಾಡಿದ ಬಳಿಕ ಸಾಲ ಮಾಡಿದ ತೆಗೆದ ಲಾರಿಯ ಕಂತು ಪಾವತಿ ಬಾಕಿಯಾಗಿ ಫೈನಾನ್ಸ್ ನವರ ನಿತ್ಯ ಕಿರುಕುಳಕ್ಕೆ ಬೇಸೆತ್ತು ಲಾರಿ ಮಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ ಘಟನೆ ಬುಧವಾರ ನಡೆದಿದೆ
ಎಲಿಮಲೆಯ ಭಾನುಪ್ರಕಾಶ್ ತಳೂರು ಎಂಬವರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಬುಧವಾರ ಮಧ್ಯಾಹ್ನ ಮನೆಯಲ್ಲಿ ವಿಷ ಸೇವಿಸಿದ್ದು, ಮನೆಯವರು ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ. ಫೈನಾನ್ಸ್ ಒಂದರಿಂದ ಸಾಲ ಪಡೆದ ಲಾರಿ ಖರೀದಿ ಮಾಡಿದ್ದರು. ಬಳಿಕ ಕೆಂಪು ಕಲ್ಲು ಮತ್ತು ಮರಳು ಸಾಗಾಟ ನಡೆಸುತ್ತಿದ್ದರು. ಇದೀಗ ಕೆಂಪು ಕಲ್ಲು ಸಾಗಾಟದ ಮೇಲೆ ಸರಕಾರದ ಕಠಿನ ನಿಯಮದಿಂದಾಗಿ ಬಾಡಿಗೆ ಇಲ್ಲದೇ ಲಾರಿ ತೆಗೆದ ಸಾಲದ ಕಂತು ಕಟ್ಟಲು ಸಾಧ್ಯವಾಗದೇ ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬಂದು ನಿತ್ಯ ಕಿರುಕುಳ ನೀಡುತ್ತಿದ್ದರು. ಕಿರುಕುಳ ನೀಡಿದ ಬಗ್ಗೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಎತ್ನಿಸಿದ್ದ್ದು ಈ ಪತ್ರ ಮನೆಯವರಿಗೆ ದೊರೆತ ಹಿನ್ನಲೆಯಲ್ಲಿ ಆತ್ಮಹತ್ಯೆ ಯತ್ನ ವಿಚಾರ ತಿಳಿದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.