ಕೃಷಿಕ ಸಮಾಜದ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ನೆರವು: ಚಲುವರಾಯಸ್ವಾಮಿ

Oplus_19005440


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.08:
ಕೃಷಿಕ ಸಮಾಜ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡಿದೆ. ಇದು ಸರ್ಕಾರ ಮತ್ತು ರೈತರ ನಡುವೆ ಕೊಂಡಿಯಾಗಿ‌ ಕೆಲಸ ಮಾಡುತ್ತಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಅವರು ಇಂದು ನಗರದ ಹಳೇ ತಾಲೂಕು ಕಚೇರಿ ಆವರಣಲ್ಲಿ  ಜಿಲ್ಲಾ  ಕೃಷಿಕ ಸಮಾಜದಿಂದ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿ ಸಿರುವ   ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಕೃಷಿಕ‌ ಸಮಾಜದ ಕಟ್ಟಡವನ್ನು ಹೊಂದಿರುವ ಮೂರನೇ ಜಿಲ್ಲೆ ಬಳ್ಳಾರಿಯಾಗಿದೆ. ರಾಜ್ಯದ 36 ತಾಲೂಕಿನಲ್ಲಿ ನಿವೇಶನ 32 ತಾಲೂಕಿನಲ್ಲಿ ಕೃಷಿಕ ಸಮಾಜ ಕಟ್ಟಡ ಹೊಂದಿದೆ. 27.5 ಲಕ್ಷ ರೂಗಳನ್ನು ತಾಲೂಕು ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ ಜಿಲ್ಲಾ ಕಟ್ಟಡ ನಿರ್ಮಾಣಕ್ಜೆ ನೀಡಲಿದೆಂದರು.
ಬೆಂಗಳೂರಿನಲ್ಲಿನ ಕೃಷಿಕ ಸಮಾಜ ಕಟ್ಟಡ ನಿರ್ಮಿಸಲು ಕೇಂದ್ರದ ಮಾಜಿ ಸಚಿವೆ, ಬಳ್ಳಾರಿ ಲೋಕಸಭಾ ಸದಸ್ಯೆಯಾಗಿದ್ದ ದಿ.ಬಸವರಾಜೇಶ್ವರಿ ಅವರು ಹಣ ನೀಡಿದ್ದರಿಂದ ರಾಜ್ಯ ಮಟ್ಟದ ಕೃಷಿಕ ಸಮಾಜ ಕಟ್ಟಡಕ್ಕೆ ಅವರ ಹೆಸರು ಇಡಲಾಗಿದೆ. ಈ ಕಟ್ಟಡಕ್ಕೂ ಅವರ ಹೆಸರು ಇಡಲು ಸೂಚಿಸಿದರು
ಲೋಕಸಭಾ ಸದಸ್ಯ ಇ.ತುಕರಾಂ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 2.81 ಲಕ್ಷ ಎಕರೆ ಕೃಷಿಗೆ ಲಭ್ಯ ಇದೆ. ಇದರಲ್ಲಿ ಒಂದು ಲಕ್ಷ ಮಳೆ ಆಶ್ರಿತವಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರದ ಸಮಸ್ಯೆ ಇದೆ. ಅಕಾಲಿಕ ಮಳೆಯಿಂದ ಭತ್ತದ ಬೆಳೆ ನಾಶವಾಗಿದೆ ಇದಕ್ಕೆ ಪರಿಹಾರ ನೀಡಬೇಕು ಎಂದರು
ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಸಂಸದರ ನಿಧಿಯಿಂದ ತಲಾ ಎರಡು ಲಕ್ಷ ರೂ ನೀಡಲಿದೆ. ಕೆಎಂಆರ್ ಸಿ ನಿಧಿಯಡಿ ಕೃಷಿ ಉಪಕರಣಗಳನ್ನು ನೀಡಲಿದೆಂದರು.
ನಗರ ಶಾಸಕ ಭರತ್ ರೆಡ್ಡಿ ಅಧ್ಯಕ್ಷತೆವಹಿಸಿ. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಮಾಡಲಿದೆ. ರೈತರಲ್ಲಿ ತಾರತಮ್ಯ ಮಾಡುವುದಿಲ್ಲವೆಂದರು.
ಸಮಾರಂಭದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಕೃಷಿಕ ಸಮಾಜದ ಅಧ್ಯಕ್ಷ ಪಿ.ಗಾದೆಪ್ಪ, ನಿರ್ದೇಶಕ ಅಲ್ಲಿಪುರದ ವೆಂಕಟಸ್ವಾಮಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಜಂಟಿ‌ನಿರ್ದೇಶಕ ಸೋಮಸುಂದರ ಕೆ.ಎಂ ಸ್ವಾಗತಿಸಿದರು.
ಈ ವೇಳೆ ವಿವಿಧ ಸ್ವಸಹಾಯ ಸಂಘಗಳಿಂದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣೆ ಯೋಜನೆಯಡಿ ಉತ್ಪಾದಿಸಿದ ಆಹಾರ ಪದಾರ್ಥಗಳ ಮತ್ತು ಕೃಷಿ ಸಲಕರಣೆಗಳ ಪ್ರದರ್ಶನ ರೈತರ ಗಮನ ಸೆಳೆಯಿತು.