
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಮೇ.4:– ತಥಾಗತ ಗೌತಮ ಬುದ್ಧನ ಧಮ್ಮವನ್ನು ಒಪ್ಪಿಕೊಂಡು, ಪಂಚಶೀಲಗಳನ್ನು ಪಾಲಿಸುತ್ತಾ, ಜೀವನದ ಗುರಿಯನ್ನು ಸಾಧಿಸಲು ಸನ್ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದು ನಳಂದ ಬುದ್ಧ ವಿಹಾರದ ಪ್ರಧಾನ ಬಿಕ್ಕು ಬೋಧಿರತ್ನ ಭಂತೆಜೀ ಹೇಳಿದರು.
ತಾಲೂಕಿನ ಕೂಡ್ಲೂರು ಗ್ರಾಮದ ಬಳಿಯಿರುವ ನಳಂದ ಬುದ್ಧ ವಿಹಾರದ ಆವರಣದಲ್ಲಿ ಗೌತಮ ಬುದ್ಧ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ನ ವತಿಯಿಂದ ಆಯೋಜಸಿದ್ದ 2670ನೇ ಬುದ್ಧ ಪೂರ್ಣಿಮಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ನಾವು ಅಂಬೇಡ್ಕರ್ ವಾದಿ, ಬೌದ್ಧ ಬಿಕ್ಕುವಾಗಿ ಹೇಳುವುದೇನೆಂದರೆ ಯಾರಿಗೆ ಅರಿವಿನ ಪ್ರಜ್ಞೆ ಜಾಗೃತಿ ಬರುತ್ತದೊ,ಆ ಜಾಗೃತಿ ಮನಸ್ಸುಗಳು ದಮ್ಮದ ಕಡೆಗೆ ಮನಸ್ಸು ಮಾಡುತ್ತವೆ ಎಂದರು.
ಮೋದಲು ಮಾನಸಿಕ ಗುಲಾಮಗಿರಿಯಿಂದ ಹೊರಬರಬೇಕು. ಭಾರತ ದೇಶದ ಪ್ರತಿಯೊಬ್ಬ ಪ್ರಜೆಯು ಮಾನಸಿಕ ಗುಲಾಮಗಿರಿಯಿಂದ ದೂರವಿರಲು ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನವನ್ನು ನೀಡಿದ್ದಾರೆ.
ಸಂವಿಧಾನ ಬದ್ಧವಾದ ನಮ್ಮ ಹಕ್ಕುಗಳಿಗಾಗಿ ಹೊರಟ ಮಾಡಲು ದಲಿತ ಎಂಬ ಪದದಿಂದ ತದನಂತರ ಬಹುಜನರು ನಂತರ ಬುದ್ಧ ಧರ್ಮದಿಂದ ಪರಿವರ್ತನೆ ಹೊಂದಬೇಕು. ನಾವೆಲ್ಲರೂ ಬುದ್ಧ ಧರ್ಮದ ಮರದ ಕಾಂಡಗಳು ಬೌದ್ಧ ಧರ್ಮದ ಫಲ ಪುಷ್ಪಗಳು ಎಂದರು.
ಈ ದೇಶದ ನೆಲೆಯಲ್ಲಿ ಹುಟ್ಟಿದ ಬೌದ್ಧ ಧರ್ಮವನ್ನು ಚೀನಾ ಜಪಾನ್ ಚೈನಾ ಅಮೆರಿಕ ಶ್ರೀಲಂಕಾ ಹಾಗೂ ಪ್ರಪಂಚದ ಹಲವಾರು ರಾಷ್ಟ್ರಗಳು ಈ ಧರ್ಮದ ಪಂಚಶೀಲ ತತ್ವಗಳು ಸಮಾನತೆಗಳು ಒಪ್ಪಿಕೊಂಡಿದ್ದಾರೆ. ಇನ್ನು ಮುಂದಾದರೂ ಮೌಡ್ಯ ಬಿಟ್ಟು ಬುದ್ಧ ಧರ್ಮದ ಕಡೆ ನಡೆಯೋಣ ನಮ್ಮ ಮಕ್ಕಳ ಭವಿಷ್ಯವನ್ನು ಸದೃಢರಾಗಿ ಮಾಡೋಣ ಎಂದು ಬೋಧಿರತ್ನ ಭಂತೆಜೀ ಹೇಳಿದರು.
ಬೌದ್ಧ ಮಹಾ ಉಪಾಸಕ ಜಂಬೂ ದ್ವಿಪದ ನಾಗಸಿದ್ದಾರ್ಥ. ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್‍ಎನ್ ಸಿದ್ದಾರ್ಥ, ಬಿಎಸ್‍ಐ ಮಹಿಳಾ ಘಟಕದ ಶಶಿಕಲಾ ಸುರೇಶ್, ಕೆಂಚಪ್ಪ ಅವರು ಗೌತಮ ಬುದ್ಧ ಮತ್ತು ಅಂಬೇಡ್ಕರ್ ಅವರನ್ನು ಕುರಿತು ಮಾತಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಬಿ.ಆರ್.ಪುಟ್ಟಸ್ವಾಮಿ, ಮಹದೇವಯ್ಯ (ಸೀನಪ್ಪ ), ಎನ್.ಲಿಂಗಪ್ಪಾಜಿ, ಹಾಗೂ ಜಗದೀಶ್, ನರಸಿಂಹಯ್ಯ, ನಾರಾಯಣ ಮೂರ್ತಿ, ದಂಡಿಕೆರೆ ಬಸವಣ್ಣ, ಬಿ ಮಹದೇವಸ್ವಾಮಿ, ಶಿವಮಲ್ಲಯ್ಯ, ಜಯಪ್ಪ, ನಾಗರಾಜು, ಲಕ್ಷ್ಮಣ ಶಿವಕುಮಾರ್, ನಾಗರಾಜ್ ಮೂರ್ತಿ, ರಾಜಣ್ಣ ಸೇರಿದಂತೆ ಇತರರು ಇದ್ದರು.























