Home ಜಿಲ್ಲೆ ಕುರುಗೋಡು – ಸೇಂದಿ ಅಕ್ರಮ ಸಾಗಣೆ: ಪ್ರಕರಣ ದಾಖಲು

ಕುರುಗೋಡು – ಸೇಂದಿ ಅಕ್ರಮ ಸಾಗಣೆ: ಪ್ರಕರಣ ದಾಖಲು

ಸಂಜೆವಾಣಿ ವಾರ್ತೆ

ಕುರುಗೋಡು:ಮೇ,31- ವಾಹನವೊಂ ದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 100 ಲೀಟರ್ ಸೇಂದಿ ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಯಲ್ಲಾಪುರ ಕ್ರಾಸ್ನಲ್ಲಿ ಶುಕ್ರವಾರ ಸಂಭವಿಸಿದೆ.

ಆಂಧ್ರಪ್ರದೇಶದ ಉರವಕೊಂಡ ತಾಲ್ಲೂಕಿನ ಜಲ್ಲಿಪಲ್ಲಿ ಗ್ರಾಮದಿಂದ ಸುಧಾಕರ ಎಂಬುವರು ಗೋಪಿ ಅವರ ಮುಖಾಂತರ ವಾಹನದಲ್ಲಿ ಯಲ್ಲಾಪುರ ಗ್ರಾಮದ ತಿಪ್ಪೇಸ್ವಾಮಿ ಅವರಿಗೆ ಸೇಂದಿ ಸರಬರಾಜು ಮಾಡುತ್ತಿದ್ದರು. ಖಚಿತ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ದಾಳಿ ನಡೆಸಿ ಸೇಂದಿ ಬಾಟಲಿ ಹಾಗೂ ವಾಹನ ಸಮೇತ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಪಿಎಸ್ಐ ಸುಪ್ರಿತ್ ವಿ., ಸಿಬ್ಬಂದಿ ಶರಣಪ್ಪ ಮತ್ತು ರೇವಣ್ಣ ಕಾರ್ಯಾಚರಣೆಯಲ್ಲಿ ಇದ್ದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.