ಕುರುಗೋಡು ನಲ್ಲಿ ಗಮನ ಸೆಳೆದ ವಿಶೇಷ ಚೇತನರ ಸಂಕ್ರಾಂತಿ ಕ್ರೀಡಾಕೂಟ.


ಸಂಜೆವಾಣಿ ವಾರ್ತೆ
ಕುರುಗೋಡು ಜ.14.
ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿ ಜ.12ರಂದು ಶ್ರೀ ದೊಡ್ಡ ಬಸವೇಶ್ವರ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ, ಗ್ರಾಮೀಣ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಕರವೇ ಶಿವರಾಮೇಗೌಡ ಬಣ ಸಹಯೋಗದಲ್ಲಿ, ವಿಶೇಷ ಚೇತನರ ವಲಯ ಮಟ್ಟದ ಸಂಕ್ರಾಂತಿ ಕ್ರೀಡಾಕೂಟ ನಡೆಯಿತು. ತಾಲೂಕು ಗ್ರೇಡ್ 2 ತಹಸಿಲ್ದಾರ್ ಮಲ್ಲೇಶಪ್ಪ, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ ರೊಂದಿಗೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕಳೆದ 3 ವರ್ಷದಿಂದ ಸಂಸ್ಥೆಯು ವಿಭಿನ್ನ ಚಟುವಟಿಕೆಗಳ ಮೂಲಕ, ವಿಶೇಷ ಚೇತನ ಮಕ್ಕಳ ಆರೋಗ್ಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಸರ್ಕಾರದಿಂದ ಸಿಗುವ ಪಿಂಚಣಿ ಇತರೆ ಸೌಲಭ್ಯಗಳ ಪ್ರಯೋಜನ ಪಡೆಯಬೇಕು. ಸ್ಥಳೀಯ  ಉಮಾಪತಿಗೌಡರ ಕುಟುಂಬದವರ ಸಮಾಜ ಸೇವೆಯಲ್ಲಿನ ಕಾಳಜಿ ಪ್ರತಿಯೊಬ್ಬರಿಗೂ ಪ್ರೇರಣದಾಯಕವಾದದ್ದು ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ ಮಾತನಾಡಿ ವಿಶೇಷ ಚೇತನ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡು, ಅವರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ. ವಿಶೇಷ ಚೇತನ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸುಧಾರಣೆಗೆ ಪುರಸಭೆಯಿಂದ ಸಾಧ್ಯವಾದ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು. ಸಂಯೋಜಕ ಫಣಿರಾಜ್ ಮಾತನಾಡಿ, ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸುತ್ತಿರುವುದು ಲಾಭ ಉದ್ದೇಶದಿಂದ ಅಲ್ಲ. ಅವರ ಸೇವೆಗಾಗಿ ಮತ್ತು ನಮ್ಮ ಆತ್ಮತೃಪ್ತಿಗಾಗಿ. ವಿಶೇಷ ಚೇತನ ಮಕ್ಕಳು ರಾಜ್ಯ, ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ.ನಿರ್ಮಲ, ಪುರಸಭೆ ಆಡಳಿತ ಅಧಿಕಾರಿ ಪ್ರೇಮ್ ಚಾಲ್, ಮುಖ್ಯಧಿಕಾರಿ ದತ್ತಾತ್ರೇಯ ಪಾಟೀಲ್, ಸ್ಮೈಲ್ ಸಂಸ್ಥೆಯ ಕಾರ್ಯದರ್ಶಿ ಉಮಾಪತಿಗೌಡ, ಕರವೇ ಜಿಲ್ಲಾಧ್ಯಕ್ಷ ರಾಜಣ್ಣ ಮತ್ತು ಮುಖಂಡರಾದ ಮೃತ್ಯುಂಜಯ, ಮಾರೆಣ್ಣ, ದೈಹಿಕ ಶಿಕ್ಷಕ ವಿರೂಪಾಕ್ಷಯ್ಯ, ಮುಖ್ಯ ಶಿಕ್ಷಕಿ ಗೀತಾ, ಜಾನೂರು ರಾಜಸಾಬ್, ಪ್ರಭುಗೌಡ, ಬಸವರಾಜಗೌಡ ಇತರರು ಕ್ರೀಡಾಕೂಟ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿಶೇಷ ಚೇತನ ಮಕ್ಕಳು ವಿವಿಧ ವಿಭಾಗದ ಕ್ರೀಡೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.