Home Uncategorized ಕುರುಗೋಡು ಜಾತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯದ ಮಳಿಗೆ.

ಕುರುಗೋಡು ಜಾತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯದ ಮಳಿಗೆ.

ಸಂಜೆವಾಣಿ ವಾರ್ತೆ

 ಕುರುಗೋಡು ಮಾ.4. ಪಟ್ಟಣದಲ್ಲಿ ಮಾ.3 ರಂದು ನಡೆದ, ಶ್ರೀ ದೊಡ್ಡಬಸವೇಶ್ವರ ಜಾತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಹಾಗೂ ಕುರುಗೋಡು ತಾಲೂಕು ಆರೋಗ್ಯ ಅಧಿಕಾರಿಗಳ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ, ಜಾತ್ರೆಯ ಪ್ರಯುಕ್ತ ಆರೋಗ್ಯ ಮಾಹಿತಿ ಮಳಿಗೆ ಹಾಕಲಾಗಿತ್ತು. ಜಾತ್ರೆಗೆ ಬಂದ ಸಾರ್ವಜನಿಕರಿಗೆ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯವರು  ಆರೋಗ್ಯದ ಕುರಿತು ಮಾಹಿತಿಗಳನ್ನು ನೀಡಿದರು. ಜಿಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಮತ್ತು ಅದರ ಯೋಜನೆಗಳ ಕುರಿತು, ಈಗ ಬೇಸಿಗೆ ಪ್ರಾರಂಭಗೊಂಡಿದ್ದು ಬೇಸಿಗೆಯಲ್ಲಿ ಆರೋಗ್ಯದ ಕಾಳಜಿ ವಹಿಸುವ ಕುರಿತು, ಸಾಂಕ್ರಾಮಿಕ ರೋಗಗಳು ಹರಡುವ ಮುಂಚೆ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಕುರಿತು, ಆರೋಗ್ಯ ಕಾಪಾಡಿಕೊಳ್ಳಲು ಸಿಬ್ಬಂದಿಯವರಿಂದ ಮಾಹಿತಿ ಪಡೆಯುವ ಕುರಿತು, ಉತ್ತಮ ಆರೋಗ್ಯಕ್ಕಾಗಿ ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವ ಕುರಿತು, ಬಾಣಂತಿಯರಲ್ಲಿ ನವಜಾತ ಶಿಶುಗಳಲ್ಲಿ ಹದಿಹರೆಯದವರಲ್ಲಿ ಗರ್ಭಿಣಿಯರಲ್ಲಿ ವಯಸ್ಸಾದವರಲ್ಲಿ ಕಂಡುಬರುವ ಯಾವುದೇ ರೋಗಗಳಿಗೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನೂರಾರು ಜನ ಅರೋಗ್ಯ ಮಳಿಗೆಯ ಹತ್ತಿರ ಬಂದು, ತಮಗೆ ಬೇಕಾದ ಆರೋಗ್ಯದ ಮಾಹಿತಿಗಳನ್ನು ಪಡೆದುಕೊಂಡರು. ಮಳಿಗೆಯಲ್ಲಿ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದಾಬೇಗಂ, ಜಿಲ್ಲಾ ಸರ್ವೇಕ್ಷಣ ಘಟಕ ವಿಭಾಗ ಆರೋಗ್ಯ ಅಧಿಕಾರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ನಮ್ಮ ಕ್ಲಿನಿಕ್ ಆಪ್ತ ಸಮಾಲೋಚಕರು, ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗದವರು ಇದ್ದರು.