
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.04: ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್ ಇವರ ಮೇಲೆ ನಡೆದಿರುವ ಹಲ್ಲೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಮಾಜ ಖಂಡಿಸಿದ್ದು. ಹಲ್ಲೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ,
ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದು.ಇಂತಹ ಘಟನೆಗಳು ನಡೆಯಲು ಪ್ರಮುಖ ಕಾರಣವೆಂದರೆ ಮಹಾನಗರ ಪಾಲಿಕೆಯಲ್ಲಿನ ಸಿಬ್ಬಂದಿ ಕೊರತೆ, ಅಧಿಕಾರಿಗಳ ಮೇಲೆ ಒತ್ತಡ, ಬಳ್ಳಾರಿಯ ಸುಂದರ ರಸ್ತೆಗಳ ನಿರ್ಮಾಣಕ್ಕಾಗಿ, ರಸ್ತೆ ಒತ್ತುವರಿಗಳ ಕಾರ್ಯಾಚರಣೆಯಲ್ಲಿ, ಯಾವುದೇ ಮುಲಾಜಿಲ್ಲದೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ವೀರೇಶ ಅವರು. ಇಂತಹ ಅಧಿಕಾರಿಗಳ ಮೇಲೆ ಕೈ ಕೈ ಮಿಲಾಯಿಸಿರುವುದು ಅಕ್ಷಮ್ಯ ಅಪರಾಧ ಎಂದಿವೆ.
ಪಾಲಿಕೆಯ ಸದಸ್ಯರಿಂದ ಹಿಡಿದು ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ಎಲ್ಲರೂ ಸೇರಿ ಮಹಾನಗರ ಪಾಲಿಕೆಯಲ್ಲಿರುವ ಸಿಬ್ಬಂದಿಯ ಕೊರತೆಯನ್ನು ನೀಗಿಸುವವರೆಗೆ. ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಕುಳಿತು ನೇಮಕಾತಿ ಆಗುವವರಿಗೆ ಛಲ ಬಿಡದೆ ಹೋರಾಟದ ಮೂಲಕ ಸಾಧಿಸಿಲಿ ಎಂದು ಒತ್ತಾಯಿಸುತ್ತೇವೆ ಎಂದಿವೆ.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ , ಅಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಸಮಾಜದ ಹಿರಿಯ ಮುಖಂಡರಾದ, ಬಿ ಎಂ. ಎರಿಸ್ವಾಮಿ, ಸಿರಿಗೇರಿ ವಿಶ್ವನಾಥ್, ಜೆ ವಿ ಮಂಜುನಾಥ, ತಾಳೂರು ರಸ್ತೆ ನಟರಾಜ್, ಚಂದ್ರಶೇಖರ್, ಕಲ್ಲುಕಂಬ ಪ್ರಭುಶೇಕರಗೌಡ, ಕೆರನಹಳ್ಳಿ ಚಂದ್ರಶೇಖರ್, ಜಿ ಬಸವರಾಜ್ ಗೌಡ, ಸಿರಿವಾರ ದಿವಾಕರ ಗೌಡ, ಬಿ.ಎಂ.ಚಂದ್ರಮೌಳಿ, ಮೋಕ ಮುದ್ದನ ಗೌಡ, ವಿಜಯಕುಮಾರ್ ಗೌಡ, ಮೋಕಾ ವೀರನಗೌಡ, ಮುಂತಾದವರು ಇದ್ದರು




















