ಕುಡುತಿನಿ ಭೂ ಸಂತಸ್ತ್ರರ ಜೊತೆ ಆ 25 ರಂದು ಸರ್ಕಾರದ ಸಭೆ: ತುಕರಾಂ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.09:
ತಮ್ಮ ಜಮೀನುಗಳಿಗೆ ನ್ಯಾಯಯುತವಾದ ಬೆಲೆ ನೀಡಬೇಕೆಂದು ಆಗ್ರಹಿಸಿ ಕಳೆದ 950 ದಿನಗಳಿಂದಲೂ ಕುಡುತಿನಿಯಲ್ಲಿ ಧರಣಿ ನಡೆಸುತ್ತಿರುವ ಭೂಸಂತ್ರಸ್ಥರ ಜೊತೆ ಆ 25-26. ರಂದು ಸರ್ಕಾರ ಮಾತುಕತೆಯ ಸಭೆ ನಡೆಸಲಿದೆಂದು ಲೋಕಸಭಾ ಸದಸ್ಯ ಇ.ತುಕರಾಂ ಹೇಳಿದ್ದಾರೆ.
ಇಂದು ಅವರು ಸಂತ್ರಸ್ಥರ ಧರಣಿ ಸ್ಥಳಕ್ಕೆ ಆಗಮಿಸಿ.‌ ತಾವು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಜೊತೆ ಚರ್ಚಿಸಿದ್ದು ಅಗಸ್ಟ್ 25- 26 ರಂದು ವಿಧಾನಸಭೆ ಯಲ್ಲಿ ಜಂಟಿ ಸಭೆಯನ್ನು ಮಾಡಲು ತೀರ್ಮಾನ ಮಾಡಲಾಗಿದೆಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಜಂಟಿ ಸಭೆಯಲ್ಲಿ ಆಗುವ ಪರಿಣಾಮ ಗಳನ್ನು ನೋಡಿ ಮುಂದಿನ ಹೋರಾಟ ವನ್ನು ತೀರ್ಮಾನ ಕೈಗೊಳ್ಳುಲಾಗುವುದು ಎಂದು ಹೋರಾಟ ಸಮಿತಿಯ ಯು ಬಸವರಾಜ, ಜೆ ಸತ್ಯ ಬಾಬು ಮೊದಲಾದವರು ಹೇಳಿದ್ದಾರೆ.
ಕುಡಿತಿನಿ ಬಾಗದಲ್ಲಿ ಜಂಟಿ ಹೋರಾಟ ಸಮಿತಿಯು ಬಾಗವಾಗಿ 966 ದಿನಗಳಿಂದಲೂ ನಿರಂತರವಾಗಿ ಹೋರಾಟ ಮಾಡಿತಿದ್ದು , ಹೋರಾಟದ ಭಾಗವಾಗಿ ಅಗಸ್ಟ್ 7-8 ರಂದು‌ ಸಂಡೂರು ಸಂಸದರು, ಶಾಸಕ ಕಚೇರಿ ಮುಂದೆ ಪ್ರತಿಭಟನೆ ನಡೆದಲು ಕುಡುತಿನಿಯಿಂದ ಪಾದಯಾತ್ರೆ ಮಾಡಲೂ ತೀರ್ಮಾನಮಾಡಿತ್ತು. ಅಂದು ಸಂಸದ ಇ ತುಕಾರಾಂ ಅವರು ಆಗಸ್ಟ್ 9 ರಂದು ಹೋರಾಟದ ಸ್ಥಳಕ್ಕೆ ಬಂದು ರೈತರ ಜೊತೆ ಚರ್ಚೆ ಮಾಡುವುದಾಗಿ ಭರವಸೆಯನ್ನು ನೀಡಿದ್ದರು , ಅದರ ಭಾಗವಾಗಿ ಇಂದು ಆಗಮಿಸಿದ್ದರು