
ಸಂಜೆವಾಣಿ ವಾರ್ತೆ
ತಿ.ನರಸೀಪುರ ಜ.3:- ಅಸಂಘಟಿತ ಕಾರ್ಮಿಕರಂತೆ ಜೀವನ ನಿರ್ವಹಣೆಗೆ ದುಡಿಯುತ್ತಿರುವ ಪ್ರತಿಯೊಬ್ಬ ಛಾಯಾಗ್ರಾಹಕರೂ ಜೀವವಿಮೆ ಮಾಡಿಸಬೇಕು. ಆಕಸ್ಮಿಕ ಸಂರ್ದಭದಲ್ಲಿ ನಮ್ಮನ್ನೇ ನಂಬಿದ ಕುಟುಂಬಗಳಿಗೆ ವಿಮಾ ಸೌಲಭ್ಯ ಸಹಕಾರಿಯಾಗಲಿದೆ ಎಂದು ಮೈಸೂರು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಿ.ವಿಜಯ್ ಸಲಹೆ ನೀಡಿದರು.
ಪಟ್ಟಣ ಸಮೀಪದ ಹೆಳವರಹುಂಡಿಯಲ್ಲಿರುವ ಶ್ರೀ ಕನಕ ಭವನದಲ್ಲಿ ಶುಕ್ರವಾರ ತಾಲೂಕು ಛಾಯಾಗ್ರಾಹಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಭಾವಚಿತ್ರಕ್ಕೆ ಪುಷ್ಟರ್ಚಾನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಕ್ರಾಂತಿಯಿಂದಾಗಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಕ್ಯಾಮರ ಬಳಕೆಯಿಂದ ಛಾಯಾಗ್ರಾಹಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ವೃತ್ತಿನಿರತ ಛಾಯಾಗ್ರಾಹಕರು ಸೃಜನಶೀಲತೆ ವೃದ್ಧಿಸಿಕೊಂಡು ಉದ್ಯೋಗವನ್ನು ಸ್ಥಿರಗೊಳಿಸಿಕೊಳ್ಳಬೇಕು ಎಂದರು. ತಾಲೂಕಿನ ಛಾಯಾಗ್ರಾಹಕರು ಕೂಡ ಜಿಲ್ಲಾ ಸಂಘಕ್ಕೆ ನೊಂದಾವಣಿ ಮಾಡಿಸಿಕೊಂಡು ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕು. ಸಂಘದ ಮೂಲಕ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳವಂತೆ ಬಿ.ವಿಜಯ್ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಛಾಯಾಗ್ರಾಹಕರಿಗೆ ಐಡಿ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು. ತಾಲೂಕು ಛಾಯಾಗ್ರಾಹಕರ ಸಂಘದ 2026 ನೇ ನೂತನ ಕ್ಯಾಲೆಂಡ್ ಬಿಡುಗಡೆಗೊಳಿಸಿದರು.
ಜಿಲ್ಲಾ ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಧನಂಜಯ, ನಿರ್ದೇಶಕರಾದ ಮಂಜುನಾಥ್, ಉಮಾಶಂಕರ್, ತಾಲೂಕು ಸಂಘದ ಅಧ್ಯಕ್ಷ ಎಸ್.ಕೆ. ಶಿವಕುಮಾರ್, ಹಿರಿಯ ಛಾಯಾಗ್ರಾಹಕ ಚನ್ನಬಸವಣ್ಣ, ಕಾರ್ಯದರ್ಶಿ ಆರ್ ಶಾಂತಕುಮಾರ್, ಉಪಾಧ್ಯಕ್ಷರಾದ ಫಾಸ್ಟ್ ಪ್ರಕಾಶ್, ನಟರಾಜು, ಖಜಾಂಚಿ ನಂಜುಂಡ ಆರಾಧ್ಯ, ಪದಾಧಿಕಾರಿಗಳಾದ ಆರ್.ಪಿ.ಶಿವಕುಮಾರ್, ರಘುನಂದನ್, ಎಸ್.ಶ್ಯಾಮ್, ಮಂಜುನಾಥ್. ಎಸ್. ನಂಜುಂಡಸ್ವಾಮಿ, ಎನ್, ಪ್ರದೀಪ್, ನವೀನ್ ಕುಮಾರ್, ಎಸ್.ಮಧುಸೂದನ್, ಆರ್, ಮಹೇಶ್, ಸಂಜು, ಹೊನ್ನಪ್ಪ ಮಂಜು, ಸಹನಾ ಮಂಜು, ಮನೋಜ್ ಕುಮಾರ್ ಹಾಗೂ ಸರ್ವ ಸದಸ್ಯರು ಇದ್ದರು.




























