ಕಾಲ್ತುಳಿತಕ್ಕೆ ಸರ್ಕಾರವೇ ನೇರ ಹೊಣೆ: ಪ್ರಹ್ಲಾದ್ ಜೋಶಿ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.07:-
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತದಿಂದ 11 ಮಂದಿ ಮೃತಪಟ್ಟಿದ್ದು, ರಾಜ್ಯ ಸರ್ಕಾರವೇ ಇದರ ನೈತಿಕ ಹೊಣೆ ಹೊರಬೇಕು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು P್ಷÀಣವೂ ತಮ್ಮ ಸ್ಥಾನದಲ್ಲಿ ಮುಂದುವರೆಯಬಾರದು. ಈ P್ಷÀಣವೇ ಸಿಎಂ ಹಾಗೂ ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಹೈಕಮಾಂಡ್ ಇದ್ದರೇ ಕೂಡಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಕ್ರಮ ಜರುಗಿಸಬೇಕು. ಬೆಂಗಳೂರು ಪೆÇಲೀಸ್ ಆಯುಕ್ತರು ಬರವಣಗೆಯಲ್ಲಿ ಭದ್ರತೆ ನಿರಾಕರಿಸಿಲ್ಲ ಎಂಬ ಕಾರಣಕ್ಕೆ ಸಸ್ಪೆಂಡ್ ಮಾಡಿದ್ದೀರಿ. ನೀವೆ ನಿಮ್ಮ ಟ್ವಿಟ್ಟರ್‍ನಲ್ಲಿ ಅಭಿಮಾನಿಗಳಿಗೆ ಕರೆ ಕೊಟ್ಟಿಲ್ಲವೇ. ನಿಮ್ಮ ಡಿಸಿಎಂ ಏಪೆರ್Çೀರ್ಟ್‍ಗೆ ಹೋಗಿ ಬಾವುಟ ಹಿಡಿದುಕೊಂಡು ಬರಲಿಲ್ಲವೇ? ಇಡೀ ದಿನ ಡಿ.ಕೆ.ಶಿವಕುಮಾರ್ ದಾದಾಗಿರಿ ಮಾಡಿz್ದÁರೆ ಎಂದು ಕಿಡಿಕಾರಿದರು.

ರಾಹುಲ್‍ಗಾಂಧಿ ಇಡೀ ಪ್ರಪಂಚದಾದ್ಯಂತ ಹೋಗಿ ಎಲ್ಲವನ್ನು ಮಾತನಾಡುತ್ತಾರೆ. ಆದರೆ, ಬೆಂಗಳೂರಿನ ಘಟನೆ ಬಗ್ಗೆ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು. ಆರ್‍ಸಿಬಿ ವಿಜಯದ ನಂತರ ಬುಧವಾರ ನಡೆದದ್ದು ಅತ್ಯಂದ ದೌರ್ಭಾಗ್ಯದ ದಿನ. ಸರ್ಕಾರ ತರಾತುರಿಯಲ್ಲಿ ಹುಚ್ಚರಂತೆ ವರ್ತನೆ ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೂರು ಜನ ಸತ್ತ ನಂತರವೂ ವಿಧಾನಸೌಧದ ಬಳಿ ಸಿಎಂ, ಡಿಸಿಎಂ, ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಐಎಎಸ್ ಅಧಿಕಾರಿಗಳು ಸೆಲ್ಫಿ, ಫೋಟೋ ತೆಗೆಸಿಕೊಳ್ಳುತ್ತಿದ್ದರು. ಅವರು ಸೆಲ್ಫಿ ತೆಗೆಸಿಕೊಳ್ಳುವಾಗ ಅಲ್ಲಿ ಮೂರು ಜನ ಸತ್ತಿದ್ದರು. ಇದು ಅP್ಷÀಮ್ಯ ಅಪರಾಧÀ ಅಲ್ಲವೆ ಎಂದು ಕಿಡಿಕಾರಿದರು.

ಅಂದು 11 ಜನ ಸತ್ತ ನಂತರವೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ಬಳಿಕ ತರಾತುರಿಯಲ್ಲಿ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆ ಎಂದು ಹೇಳಿ, ಬಡ್ತಿ ಐಎಎಸ್ ಅಧಿಕಾರಿ ನೇಮಕ ಮಾಡಿದ್ದೀರಿ. ಪ್ರಕರಣದ ತನಿಖೆಗೆ ಇಷ್ಟು ತರಾತುರಿ ಯಾಕೆ, ಯಾರನ್ನು ರP್ಷÀಣೆ ಮಾಡಬೇಕಿತ್ತು. ಹೈಕೋರ್ಟ್ ಸುಮೋಟೊ ಕೇಸ್ ಹಾಕಿದ ನಂತರ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೀರಿ. ಬೆಂಗಳೂರು ಪೆÇಲೀಸ್ ಕಮಿಷನರ್ ಒಬ್ಬ ದP್ಷÀ ಅಧಿಕಾರಿ. ಅವರು ಪತ್ರದಲ್ಲಿ ಅನುಮತಿ ನಿರಾಕರಿಸಲಿಲ್ಲ ಎಂಬ ಕಾರಣ ಕೊಟ್ಟಿದ್ದೀರಿ. ನೀವೇ ವಿಧಾನಸೌಧÀದ ಮುಂದಿನ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿದ್ದೀರಿ. ನೀವು ಓಪನ್ ಕರೆ ಕೊಟ್ಟಿದ್ದಕ್ಕೆ ಅಷ್ಟು ಜನ ಬಂದಿz್ದÁರೆ. ಡಿ.ಕೆ. ಶಿವಕುಮಾರ್ ಹೋಗಿ ರಿಸೀವ್ ಮಾಡಿಕೊಂಡಿz್ದÁರೆ. ಅವರಿಗೆ ಬುದ್ದಿ ಇರಲಿಲ್ವ. ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತನಿಖೆ ಮಾಡುತ್ತೀರಾ. ಪೆÇಲೀಸ್ ಇಲಾಖೆ ನಿರಾಕರಿಸಿದ ನಂತರವೂ ಅವರನ್ನು ಕರೆಸಿದ್ದು ಯಾರು ಎಂದು ಪ್ರಶ್ನಿಸಿದರು.

ಸರ್ಕಾರವೇ ನ್ಯಾಯಾಧೀಶರನ್ನೂ ತೀರ್ಮಾನ ಮಾಡುತ್ತಿದೆ. ಜತೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನೂ ಸಂಪರ್ಕ ಮಾಡಿದೆ. ಆ ನಂತರ ವಿಚಾರಣ ಅಯೋಗಕ್ಕೆ ನ್ಯಾಯಧೀಶರನ್ನು ನೇಮಿಸಿದೆ. ಕೂಡಲೇ ಹೈಕೋರ್ಟ್ ಮಾನಿಟರ್ ತನಿಖೆ ಆಗಬೇಕು. ಹೈಕೋರ್ಟ್‍ಗೆ ಒಪ್ಪಿಗೆ ಇದ್ದರೆ ವಿಚಾರಣಾ ಆಯೋಗಕ್ಕೆ ಉತ್ತಮ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಹೇಳಿದರು.

ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಮಾತನಾಡದೇ ಇರುವುದರ ಬಗ್ಗೆ ಪ್ರತಿಕ್ರಿಯಿಸಿ, ಐ ವಿಲ್ ಆ¸್ಕï ರಾಹುಲ್ ಗಾಂಧಿ. ಡು ಯು ಹ್ಯಾವ್ ಎನಿ ಸೆ£್ಸï. ಡು ಯು ಹ್ಯಾವ್ ಎನಿ ಮೊರಾಲಿಟಿ. ನೀವು ಪ್ರಪಂಚದಲ್ಲಿ ಹೋದಲೆಲ್ಲ ಎಲ್ಲದರ ಬಗ್ಗೆ ಮಾತನಾಡ್ತೀರಿ. ಇಲ್ಲಿ ಏನಾಗಿದೆ ಎಂದು ನಿಮಗೆ ಗೊತ್ತಿಲ್ಲವಾ. ಈ ಘಟನೆ ಬಗ್ಗೆ ಯಾರದ್ದಾದರೂ ರಾಜೀನಾಮೆ ಕೇಳಿದ್ದೀರಾ. ಡಿಸಿಎಂ ರಾಜೀನಾಮೆ ಕೇಳಿದ್ದೀರಾ. ಮಿಸ್ಟರ್ ರಾಹುಲ್ ಗಾಂಧಿಯವರೇ ಕರ್ನಾಟಕದ ಬಗ್ಗೆ ಮಾತನಾಡುವ ಜವಾಬ್ದಾರಿ ನಿಮಗಿದೆ. ಆದರೆ ಈವರೆಗೆ ಏನೂ ಮಾಡಿಲ್ಲ. ಕಾಂಗ್ರೆಸ್ ಹೈಕಮಾಂಡ್ ಘಟನೆ ಗಂಭೀರವಾಗಿ ಪರಿಗಣಿಸಿ, ತP್ಷÀಣ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯಿಂದ ಆರ್‍ಸಿಬಿ ಆಟಗಾರರಿಗೆ ಸನ್ಮಾನಿಸಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯ ಶಾಸಕರು ಹಾಗೂ ಕಾರ್ಯಕರ್ತರು ಟ್ವೀಟ್ ಮಾಡಿದರು. ಹಾಗಂತ ನೀವು ಕಾರ್ಯಕ್ರಮ ಮಾಡಿದ್ದೀರಾ. ನಾವು ಹೇಳುವುದನ್ನು ಕೇಳುತ್ತೀರಾ. ನಿಮ್ಮ ಸ್ವಂತ ಬುದ್ಧಿ ಎಲ್ಲಿಗೆ ಹೋಯಿತು. ಕಾರ್ಯಕ್ರಮ ಮಾಡುವ ವೇಳೆ ಭÀದ್ರತೆಯ ಬಗ್ಗೆ ಚರ್ಚಿಸಿ ನಂತರ ಮಾಡಬೇಕು ಎಂಬ ಯೋಚನಾ ಶಕ್ತಿಯನ್ನು ಕಳೆದುಕೊಂಡಿದ್ದೀರಾ ಎಂದರು.