ಕಾರ್ಮಿಕ ದಿನಾಚರಣೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಮೇ.21
ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆ ತಡೆಗಟ್ಚಿ ಅವರಿಗೆ ಅವರ ಶಕ್ತಿಯ ಅರಿವು ಮೂಡಿಸಿ, ಅವರ ಏಳಿಗೆಗಾಗಿ ಏನೆಲ್ಲಾ ಮಾಡಬೇಕು ಎಂಬುವುದರ ಅರಿವು ಮೂಡಿಸಲು  ದೇಶಾದ್ಯಂತ ಕಾರ್ಮಿಕರ ದಿನಾಚರಣೆಯನ್ನು  ಆಚರಿಸಲಾಗುತ್ತದೆ ಎಂದು ತಾಲೂಕು ಸಿಪಿಐನ ಕಾರ್ಯದರ್ಶಿ ಕಾಂ ಜಾಫರ್ ಶರೀಫ್ ತಿಳಿಸಿದರು.
ಅವರು ನಿನ್ನೆ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಎಐಟಿಯುಸಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕಾರ್ಮಿಕ ವರ್ಗ ಇಂದು ಅದೊಗತಿಗೆ ಬಂದಿದೆ ಕಾರಣ ನಮ್ಮನ್ನಾಳುವ ಸರ್ಕಾರಗಳು. ಕಾರ್ಮಿಕರ ಹಿತರಕ್ಷಣೆಯನ್ನು ಕಾಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಕಾರ್ಮಿಕರ ಕಾಯ್ದೆಗಳನ್ನು  ತಿದ್ದುಪಡಿ ಮಾಡುವ ಮುಖಾಂತರ ಕಾರ್ಮಿಕರನ್ನು ದಿವಾಳಿ ಮಾಡಿ ಬದುಕು ದಿವಾಳಿ ಮಾಡಿವೆ. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹು ಮುಖ್ಯವಾದದ್ದು, ಎಲ್ಲಾ ಕ್ಷೇತ್ರದಲ್ಲಿಯೂ ಕಾರ್ಮಿಕರ ಶ್ರಮ ಇರುತ್ತದೆ. ಕಾರ್ಮಿಕರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಯಾದಲಿ ಮಾತ್ರ ದೇಶ ಅಭಿವೃದ್ಧಿ ಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂ ರಾಮ್ ಮೂರ್ತಿ ಕಾಂ ನಾಗಾರ್ಜುನ ರಾಯದುರ್ಗ ಕಾಂ ಪೆನ್ನಯ್ಯ ಎಐಟಿಯುಸಿ ತಾಲೂಕು ಅಧ್ಯಕ್ಷ, ಲಕ್ಷ್ಮೀದೇವಿ ತಾಲೂಕು ಅಧ್ಯಕ್ಷೆ ಅಂಗವಾಗಿ ಪೆಡರೇಷನ್, ತಿಪ್ಪೇಸ್ವಾಮಿ, ಲಕ್ಷ್ಮಣ, ತಿಮ್ಮಣ್ಣ, ವೆಂಕಟೇಶ್, ಬೋರಣ್ಣ,ಮಂಜುನಾಥ ಜ್ಯೋತಿ ಲಕ್ಷ್ಮಿ ಇನ್ನು ಮುಂತಾದವರಿದ್ದರು.