
ಬೇಕಾಗುವ ಸಾಮಗ್ರಿಗಳು:
- ಬೋನ್ ಲೆಸ್ ಚಿಕನ್ ಕಾಲು ಕೆಜಿ
- ಅರಿಶಿನ ೧ ಚಮಚ
- ಮೊಸರು ೨ ಟೇಬಲ್ ಸ್ಪೂನ್
- ? ಬೆಳ್ಳುಳ್ಳಿ ಪೇಸ್ಟ್ ೧ ಚಮಚ
- ತಂದೂರಿ ಚಿಕನ್ ಮಸಾಲ ೧ ಚಮಚ –
- ಕಾಳು ಮೆಣಸಿನಪುಡಿ ೧ ಚಮಚ –
- ಧನಿಯಾ ಪುಡಿ ೧ ಚಮಚ
- ಕಾರ್ನ್‌ಪ್ಲೆಕ್ಸ್ ೧ ಚಮಚ
- ಕಾರ್ನ್‌ಫೋರ್ ೧
- ಮೊಟ್ಟೆ – ೧
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ -೨೦೦ ೨.
ಮಾಡುವ ವಿಧಾನ:ಬೌಲ್‌ನಲ್ಲಿ ಚಿಕನ್ ಪೀಸ್, ಅರಿಶಿನ, ಮೊಸರು, ಶುಂಠಿ ? ಬೆಳ್ಳುಳ್ಳಿ ಪೇಸ್ಟ್, ತಂದೂರಿ ಚಿಕನ್ ಮಸಾಲ, ಕಾಳುಮೆಣಸಿನಪುಡಿ, ಧನಿಯಾ ಪುಡಿ, ಉಪ್ಪು, ಕಾರ್ನ್‌ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾರ್ನ್ ಪ್ಲೇಕ್ಸ್ ಅನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ. ಹಾಗೆಯೇ ಮೊಟ್ಟೆಯನ್ನು ಒಂದು ಕಪ್‌ನಲ್ಲಿ ಒಡೆದುಹಾಕಿಕೊಂಡು ಇದರಲ್ಲಿ ಚಿಕನ್ ಅದ್ದಿ, ನಂತರ ಕಾರ್ನ್ ಪ್ಲೇಕ್ಸ್ ಮಿಶ್ರಣದಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹಾಕಿ ಡೀಪ್ ಪ್ರೈ ಮಾಡಿದರೆ, ಕಾರ್ನ್‌ಪ್ಲೇಕ್ಸ್ ಚಿಕನ್ ರೆಡಿ.