Home ಜಿಲ್ಲೆ ಕಾರಾಗೃಹಗಳು ಕೈದಿಗಳ ಮನ ಪರಿವರ್ತನಾ ಕೇಂದ್ರಗಳಾಗಬೇಕು-ನ್ಯಾ. ಪ್ರಶಾಂತ್ ನಾಗಲಾಪುರ

ಕಾರಾಗೃಹಗಳು ಕೈದಿಗಳ ಮನ ಪರಿವರ್ತನಾ ಕೇಂದ್ರಗಳಾಗಬೇಕು-ನ್ಯಾ. ಪ್ರಶಾಂತ್ ನಾಗಲಾಪುರ

ಸಂಜೆವಾಣಿ ವಾರ್ತೆ

ಹೊಸಪೇಟೆ.ಸೆ.3  ಕಾರಾಗೃಹಗಳು ಕೈದಿಗಳ ಮನಸ್ಸನ್ನು ಪರಿವರ್ತಿಸುವ ಕೇಂದ್ರಗಳಾಗಿ ರೂಪುಗೊಳ್ಳಬೇಕು ಎಂದು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿಗಳು ಆದ ಪ್ರಶಾಂತ್ ನಾಗಲಾಪುರ ಹೇಳಿದರು.

 ವಿಜಯನಗರ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಜರುಗಿದ 10 ದಿನಗಳ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕಾರಾಗೃಹಗಳು ಕೇವಲ ಶಿಕ್ಷೆ ವಿಧಿಸುವ ಕಾರಾಗೃಹಗಳು ಆಗದೆ, ಕೈದಿಗಳ ಆಂತರೀಕ ಆತ್ಮಾವಲೋಕನ ಹಾಗೂ ಅವರ ಮನ ಪರಿವರ್ತನೆಯ ಕೇಂದ್ರಗಳಾಗಿ ರೂಪುಗೊಳ್ಳಬೇಕಾಗಿದೆ ಎಂದರು.

 ಧ್ಯಾನ ಮತ್ತು ಪ್ರಾಣಾಯಾಮಗಳು ಮಾನಸಿಕ  ಆರೋಗ್ಯಕ್ಕೆ ಸಹಕಾರಿಯಾಗಿದ್ದು. ಅವುಗಳನ್ನು ಕಳೆದ 10 ದಿನಗಳಿಂದ ಗುರುಗಳು ನಮಗೆ ಅಭ್ಯಾಸ ಮಾಡಿಸಿದ್ದಾರೆ. ಅವುಗಳನ್ನು  ಜೀವನದುದ್ದಕ್ಕೂ ಅಳವಡಿಸಿಕೊಳ್ಳುವ ಮೂಲಕ ನಾವು ಆರೋಗ್ಯ ಪೂರ್ಣ ಮನಸ್ಸು ಮತ್ತು ದೇಹವನ್ನು ಹೊಂದಿ ನಮ್ಮ ಪರಿವರ್ತನೆಗೆ ನಾಂದಿ ಮಾಡಿಕೊಳ್ಳಬೇಕು. ಇಂತಹ ಅಭ್ಯಾಸಗಳು ನಮ್ಮ ವಿಕೃತ ಮನಸ್ಥಿತಿಯಿಂದ ಹೊರಬರಲು ಸಹಕಾರಿಯಾಗಲಿವೆ ಎಂದರು.

ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಈ. ಸತ್ಯಪ್ಪ ಮಾತನಾಡಿ, ಯೋಗ ಧ್ಯಾನ ಮತ್ತು ಪ್ರಾಣಾಯಾಮಗಳು ನಮ್ಮನ್ನು ಸ್ವಸ್ಥ ಮನಸ್ಸುಗಳನ್ನಾಗಿ ರೂಪಿಸಲು ಸಹಕಾರಿಯಾಗಲಿವೆ. ಇಂತಹ ಅಭ್ಯಾಸಗಳನ್ನು ಜೀನವದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು. ಕಳೆದ ಹತ್ತು ದಿನಗಳ ಕಾಲ ನಮ್ಮ ಅನುಭವಿ ಯೋಗ ಶಿಕ್ಷಕರು ಉತ್ತಮ ಮಾರ್ಗದರ್ಶನವನ್ನು ನೀಡಿದ್ದಾರೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಉತ್ತಮ ಜೀನವ ರೂಪಿಸಿಕೊಳ್ಳಿ ಎಂದರು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಸಹ ಪ್ರಭಾರಿ ಬಾಲಚಂದ್ರ ಶರ್ಮಾ, ರಾಜ್ಯ ಸಮಿತಿ ಸದಸ್ಯ ರಾಜೇಶ್ ಕರ್ವಾ, ಸಾಮಾಜಿಕ ಕಾರ್ಯಕರ್ತೆ ಅಂಜಲಿ ಬೆಳಗಲ್, ಶಿಕ್ಷಕ ಮಧುಸೂದನ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್,ಜಿ,ಬಾರಿಕೇರ, ಕೆ.ರಿಯಾಜ್, ಎಸ್.ಎಸ್ ಲಕ್ಷ್ಮಣ ಸೇರಿದಂತೆ ಕಾರಾಗೃಹ ಸಿಬ್ಬಂದಿ, ಕೈದಿಗಳು, ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು