ಕಾರಂತ ಬಾಲ ಪುಸ್ಕಾರಕ್ಕೆ ಅಶ್ವಿಜ್ ಅತ್ರೇಯ ಆಯ್ಕೆ

ಸುಳ್ಯ:ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ವತಿಯಿಂದ ನೀಡುವ ಐದನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಸುಳ್ಯದ ಅಶ್ವಿಜ್ ಅತ್ರೇಯ ಆಯ್ಕೆಯಾಗಿದ್ದಾರೆ.
ಗಾಯನ, ನಟನೆ, ಮಿಮಿಕ್ರಿ ಸೇರಿ ಕಲಾ ರಂಗದಲ್ಲಿ ಸಕ್ರೀಯನಾದ ಅಶ್ವಿಜ್ ಪ್ರಭು ಬುಕ್ ಸೆಂಟರ್‌ನ ಮಾಲಕರಾದ ರಾಮಚಂದ್ರ ಹಾಗೂ ಉಷಾ ದಂಪತಿಗಳ ಪುತ್ರ. ಸುಳ್ಯ ಸೈಂಟ್ ಜೋಸೆಫ್ ಶಾಲೆಯ ೮ನೇ ತರಗತಿ ವಿದ್ಯಾರ್ಥಿ. ಕೋಟ ಕಾರಂತ ಥೀಮ್ ಪಾರ್ಕಿನಲ್ಲಿ ನ.೩೦ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.