
ಬಾಲವನದಲ್ಲಿ ಡಾ.ಕಾರಂತ ಪ್ರಶಸ್ತಿ ಪ್ರದಾನ
ಪುತ್ತೂರು: ಮಣ್ಣಿನ ಮೂಲವನ್ನು ಗುರಿಕಾರರಿಂದ ಕಸಿದುಕೊಂಡಿರುವುದನ್ನು ಸಮಗ್ರವಾಗಿ ಪರಿಣಾಮಕಾರಿಯಾಗಿ ತಮ್ಮ ಕೃತಿಗಳ ಮೂಲಕ ಬಿಚ್ಚಿಟ್ಟ ಡಾ.ಕಾರಂತರ ದಲಿತಪರ, ನೆಲದ ಸಮಸ್ಯೆ, ಪರಿಸರ, ಮಹಿಳಾವಾದದ ಚಿಂತನೆಗಳು ಮುಂದಿನ ೧೦೦ ವರ್ಷ ಚರ್ಚೆಯಾಗಿ ಉಳಿಯುವಷ್ಟು ಗಟ್ಟಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ.ಶಿವರಾಮ ಕಾರಂತರ ಬಾಲವನ ಅಭಿವೃದ್ಧಿ ಸಮಿತಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ಬಾಲವನದಲ್ಲಿ ನಡೆದ ಹಿರಿಯ ಸಾಹಿತಿ ಡಾ. ಕೆ. ಶಿವರಾಮ ಕಾರಂತರ ೧೨೫ನೇ ಜನ್ಮ ದಿನಾಚಣೆ ಮತ್ತು ಡಾ.ಶಿವರಾಮ ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಭೂಸುಧಾರಣೆಯ ಮೂಲಕ ರೈತರು ಹೊಲದೊಡೆಯರಾಗಿದ್ದರೂ ಈಗ ಬಹುರಾಷ್ಟಿçÃಯ ಕಂಪನಿಗಳು ಬಡವರ ಜಮೀನುಗಳನ್ನು ಆಪೋಷಣೆ ತೆಗೆದುಕೊಳ್ಳುತ್ತಿವೆ. ಇಂದಿಗೂ ನೆಲೆದ ಸಮಸ್ಯೆ ಜೀವಂತವಾಗಿದೆ. ಶೇ.೫೮ರಷ್ಟು ಭೂಮಿ ಶೇ.೨ರಷ್ಟು ಜನರ ಕೈಯಲ್ಲಿಯೇ ಇದೆ. ಭೂಮಿ ಇಲ್ಲದ ೧೦ ಕೋಟಿ ಮಂದಿ ದೇಶದಲ್ಲಿದ್ದಾರೆ. ಹಾಗಾಗಿ ಕಾರಂತರ ತುಡಿತ ಇಂದಿಗೂ ವಾಸ್ತವತೆಯಾಗಿದೆ ಎಂದು
ಕಾರಂತರು ಮತ್ತು ಕುವೆಂಪು ೨೧ನೇ ಶತಮಾನದ ಉದ್ದಕ್ಕೂ ಗಟ್ಟಿಯಾಗಿ ನೆಲೆ ನಿಲ್ಲುತ್ತಾರೆ. ೪೩೮ ಕೃತಿಗಳನ್ನು ಬರೆದ ಶಿವರಾಮ ಕಾರಂತರ ಚಿಂತನೆ ಪರಿಸರವೆಂದರೆ ಕೇವಲ ಗಿಡಮರಗಳಲ್ಲ. ಜೈವಿಕ ಅನುಭೂತಿ ಎಂಬುವುದು ಇವತ್ತಿಗೂ ಸಮಕಾಲೀನವಾಗಿಯೇ ಉಳಿದಿದೆ. ೭೦ರ ದಶಕದಲ್ಲಿ ಹುಟ್ಟಿಕೊಂಡ ದಲಿತಪರ ಮತ್ತು ಮಹಿಳಾ ಪರ ಚಿಂತನೆಯ ಮೂಲವೂ ಕಾರಂತರದಲ್ಲಿದೆ. ಕಾರಂತರು ಸಮಾಜಕ್ಕೆ ನೀಡುತ್ತಿದ್ದ ಸ್ಪಂದನೆ ಅದ್ಭುತವಾದುದು ಎಂದವರು ಹೇಳಿದರು. ಡಾ.ಕಾರಂತರ ಪುತ್ರಿ ಕ್ಷöಮಾ ರಾವ್ ಮಾತನಾಡಿದರು
ಡಾ.ಕಾರಂತ ಪ್ರಶಸ್ತಿ ಪ್ರದಾನ:
ಡಾ.ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿಯನ್ನು ಪರಿಸರ ಸಂರಕ್ಷöಣೆಗೆ ಕೊಡುಗೆ ನೀಡಿದ ಪುತ್ತೂರು ಮಾಸ್ಟರ್ ಪ್ಲಾನರಿ ಸಂಸ್ಥೆಯ ಎಸ್.ಕೆ. ಆನಂದ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.
ಕೃತಜ್ಞತೆ ಸಲ್ಲಿಸಿದ ಆನಂದ ಕುಮಾರ್, ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ ಅದ್ಭುತ ಶಕ್ತಿ ಡಾ.ಕಾರಂತರು ಎಂದರು.
೨ ಕೋಟಿಯಲ್ಲಿ ಅಭಿವೃದ್ಧಿ:
ಸಮಾರಂಭದ ಅಧ್ಯಕ್ಷöತೆ ವಹಿಸಿದ್ದ ಶಾಸಕ ಅಶೋಕ್ ರೈ ಮಾತನಾಡಿ, ೨ ಕೋಟಿ ರೂ. ವೆಚ್ಚದಲ್ಲಿ ಬಾಲವನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಯೋಗ, ಸಾಹಿತ್ಯ ರಚನೆ ಮತ್ತು ಧ್ಯಾನಕ್ಕೆ ಪೂರಕವಾಗಿ ಧ್ಯಾನ ಮಂದಿರ ನಿರ್ಮಿಸಲಾಗುವುದು. ಪ್ರತ್ಯೇಕ ೫೦ ಲಕ್ಷö ವೆಚ್ಚದಲ್ಲಿ ವಾಕಿಂಗ್ ಪಥ ಮತ್ತು ದೀಪಾಲಂಕಾರ ಮಾಡಲಾಗುವುದು. ಬಾಲವನ ಅಭಿವೃದ್ಧಿ ವೇಳೆ ಇಲ್ಲಿನ ಪರಿಸರಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ ಎಂದರು.
ಪ್ರಶಸ್ತಿ ಪುರಸ್ಕೃತ ಎಸ್.ಕೆ. ಆನಂದ ಕುಮಾರ್ ಬಗ್ಗೆ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷöಕ ನಾರಾಯಣ ಭಟ್ ಮಾತನಾಡಿದರು.
ಕಾರಂತ ವೃತ್ತಕ್ಕೆ ಆಗ್ರಹ:
ಪುತ್ತೂರಿನ ಪ್ರಧಾನ ಪ್ರವೇಶ ಭಾಗದಲ್ಲಿ ಶಿವರಾಮ ಕಾರಂತರ ಹೆಸರಿನಲ್ಲಿ ಸುಂದರ ವೃತ್ತ ನಿರ್ಮಿಸಿ ಕಾರಂತರ ಪ್ರತಿಮೆ ಸ್ಥಾಪಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷö ಪುತ್ತೂರು ಉಮೇಶ್ ನಾಯಕ್ ಒತ್ತಾಯಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷö ತಾರಾನಾಥ ಗಟ್ಟಿ ಕಾಪಿಕಾಡ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷö ಡಾ.ಎಂ.ಪಿ. ಶ್ರೀನಾಥ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷö ಟಿ.ಎಂ. ಶಹೀದ್ ತೆಕ್ಕಿಲ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷö ಉಮಾನಾಥ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸುದಾನ ಶಿಕ್ಷöಣ ಸಂಸ್ಥೆಗಳ ಮುಖ್ಯಸ್ಥ ರೆ. ವಿಜಯ ಹಾರ್ವಿನ್, ಬಾಲವನ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರತಿಮಾ ಹೆಗ್ಡೆ, ದತ್ತಾತ್ರೇಯ ರಾವ್, ಸ್ವಾತಿ ಜೆ. ರೈ, ಶಿವಪ್ರಸಾದ್ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ.ಹರಿಪ್ರಸಾದï ಕಾರ್ಯಕ್ರಮ ನಿರ್ವಹಿಸಿದರು. ಪವಿತ್ರ ರೂಪೇಶ್ ತಂಡದವರು ನಾಡಗೀತೆ ಹಾಡಿದರು. ಬಾಲವನ ಕಾರ್ಯಕ್ರಮ ಸಂಯೋಜಕರಾದ ರಮೇಶ್ ಉಳಯ ಮತ್ತು ಜಗನ್ನಾಥ್ ಅರಿಯಡ್ಕ ಸಹಕರಿಸಿದರು.
























