ಕಾಮಗೆರೆ ವಿದ್ಯಾರ್ಥಿ ನಿಲಯದ ಬಂದ್: ಬೇಜವಾಬ್ದಾರಿ ಮೆರೆದ ಸಮಾಜ ಕಲ್ಯಾಣ ಇಲಾಖೆ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ನ.3:-
ವಿದ್ಯಾರ್ಥಿ ನಿಲಯಕ್ಕೆ ಬೀಗ ಹಾಕಿರುವ ಪರಿಣಾಮ ನಿಲಯದ ವಿದ್ಯಾರ್ಥಿಗಳು ತಿಂಡಿ ವ್ಯವಸ್ಥೆ ಇಲ್ಲದೆ ಹಸಿದ ಹೊಟ್ಟೆಯಲ್ಲಿ ಶಾಲೆಗೆ ತೇರಳಿರುವಂತಹ ಘಟನೆ ಇಂದು ಬೆಳಗ್ಗೆ ಸೋಮವಾರ ಕಾಮಗೆರೆ ವಿದ್ಯಾರ್ಥಿ ನಿಲಯದಲ್ಲಿ ಜರುಗಿದೆ.


ಕೊಳ್ಳೇಗಾಲ ತಾಲೂಕಿನ ಕಾಮಗೆರೆ ವಿದ್ಯಾರ್ಥಿ ನಿಲಯಕ್ಕೆ ಇಂದು ಸೋಮವಾರ ಬೆಳಗ್ಗೆ ಆಗಮಿಸಿದ ಶಾಲೆಯ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬೀಗ ಹಾಕಿರುವುದನ್ನು ಕಂಡು ವಾಪಸ್ ಶಾಲೆಗೆ ತೆರಳಿದ್ದಾರೆ. ಬೆಳಗ್ಗೆ 10-00 ಗಂಟೆ ಆದರೂ ನಿಲಯದ ಬಾಗಿಲು ತೆಗೆದಿಲ್ಲ. ಇದು ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯ ಲೋಪ ಬೇಜವಾಬ್ದಾರಿತನಕ್ಕೆ ಎತ್ತಿ ಹಿಡಿದ ಕನ್ನಡಿಯಾಗಿದೆ.
ಶಾಲೆಗೆ ಹೊರಡುವ ಮುನ್ನ ತಿಂಡಿ ತಿನ್ನುವುದಕ್ಕಾಗಿ ಹಾಸ್ಟೆಲಿಗೆ ಬರುವಂತಹ ವಿದ್ಯಾರ್ಥಿಗಳಿಗೆ ಬೆಳಗಿನ ತಿಂಡಿ ವ್ಯವಸ್ಥೆ ಇಲ್ಲದೆ. ಇತ್ತ ಸಮಯದ ಕೊರತೆಯಿಂದ ಮನೆಗೆ ಹೋಗಿ ತಿಂಡಿ ತಿಂದು ಬರುವುದಕ್ಕೂ ಆಗದೆ ಯಾರಿಗೆ ಹೇಳುವುದು ವಿದ್ಯಾರ್ಥಿಗಳ ಪಾಡು ಎಂಬಂತೆ ಹಸಿದ ಹೊಟ್ಟೆಯಲ್ಲಿ ಶಾಲೆಗೆ ತೆರಳಿದ್ದಾರೆ.


ನಿನ್ನೆ ಭಾನುವಾರವೂ ಸಹ ರಾತ್ರಿ ವೇಳೆ ಯಾರೂ ಸಹ ನಿಲಯದ ಪಾಲಕರು ಅಥವಾ ನಿಯೋಜಿತ ಸಿಬ್ಬಂದಿಗಳು ಇಲ್ಲದೆ ಬೀಗ ಹಾಕಿ ತೆರಳಿದ್ದಾರೆ. ಅಷ್ಟೇ ಅಲ್ಲದೆ ಇಂದು ಸೋಮವಾರ ಬೆಳಗ್ಗೆ 10-00 ಘಂಟೆ ಆದರೂ ಬಂದು ನಿಲಯದ ಬಾಗಿಲು ತೆಗೆದು ವಿದ್ಯಾರ್ಥಿಗಳೇ ತಿಂಡಿ ಮಾಡುವ ಕೆಲಸವನ್ನು ಮಾಡಿದೆ ಬೇಜವಾಬ್ದಾರಿ ತನ ಮೆರೆದಿದ್ದಾರೆ.
ಕಾಮಗೆರೆ ವಿದ್ಯಾರ್ಥಿ ನಿಲಯದಲ್ಲಿ ಇಂತಹ ಘಟನೆ ಹೊಸದೇನಲ್ಲ ಇದು ಪದೇ ಪದೇ ನಡೆಯುತ್ತಲೆ ಇದೆ. ಎಷ್ಟೋ ದಿನ ರಾತ್ರಿ ವೇಳೆ ಹಾಸ್ಟೆಲ್ನಲ್ಲಿ ಯಾರು ಸಿಬ್ಬಂದಿಗಳು ಉಳಿದುಕೊಳ್ಳದೆ ವಿದ್ಯಾರ್ಥಿಗಳೇ ಇರುವ ದಿನಗಳು ಕಳೆದಿವೆ. ಇದನ್ನು ಇಲ್ಲಿ ಹೇಳುವರು ಕೇಳುವರು ಯಾರು ಇಲ್ಲದಂತಾಗಿದೆ ಇಲ್ಲಿನ ಪರಿಸ್ಥಿತಿ.


ಸರ್ಕಾರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ತೆರದು ಎಲ್ಲಾ ರೀತಿಯ ಸಕಲ ಸೌಲಭ್ಯಗಳನ್ನು ನೀಡುತ್ತಿದ್ದರು. ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ವಿದ್ಯಾರ್ಥಿಗಳಿಗೆ ಸರಿಯಾದ ಊಟದ ವ್ಯವಸ್ಥೆ ಇಲ್ಲದಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿ ಕಂಡು ಬರುತ್ತದೆ.


ಕಾಮಗೆರೆ ವಿದ್ಯಾರ್ಥಿ ನಿಲಯಕ್ಕೆ ಬೀಗ ಹಾಕಿದ್ದು ವಿದ್ಯಾರ್ಥಿಗಳು ತಿಂಡಿ ಇಲ್ಲದೆ ಹಸಿದ ಹೊಟ್ಟೆಯಲ್ಲಿ ಶಾಲೆಗೆ ತೆರಳಿರುವ ಘಟನೆಗೆ ಸಂಬಂಧಿಸಿದಂತೆ ಎಚ್ಚೆತ್ತು ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಸಿದ್ದಾರೆ ಇನ್ನು ಮಂದೆ ಇದೇ ರೀತಿ ನಡೆದರೆ ಹಾಸ್ಟಲ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.