Home ಜಿಲ್ಲೆ ಮೈಸೂರು ಕಾನ್ ಸ್ಟೇಬಲ್‍ಗಳೇ ಇಲಾಖೆಗೆ ಬೆನ್ನೆಲುಬು: ಸೀಮಾ ಲಾಟ್ಕರ್

ಕಾನ್ ಸ್ಟೇಬಲ್‍ಗಳೇ ಇಲಾಖೆಗೆ ಬೆನ್ನೆಲುಬು: ಸೀಮಾ ಲಾಟ್ಕರ್

ಸಂಜೆವಾಣಿ ನ್ಯೂಸ್
ಮೈಸೂರು, ಮಾ.8:-
10 ತಿಂಗಳ ಹಿಂದೆ ನೀವುಗಳು ಏಕಾಂಗಿಯಾಗಿ ಬಂದು ಈಗ ಪೆÇಲೀಸ್ ಕುಟುಂಬ ಸೇರಿಕೊಂಡಿದ್ದೀರಾ. ಪೆÇಲೀಸ್ ಕಾನ್ಸ್‍ಸ್ಟೇಬಲ್‍ಗಳೇ ಇಲಾಖೆಗೆ ಬೆನ್ನೆಲುಬು ಎಂದು ನಗರ ಪೆÇಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.


ಮೈಸೂರಿನ ಪೆÇಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೆÇಲೀಸ್ ತರಬೇತಿ ಶಾಲೆಯ 10ನೇ ತಂಡದ ಮಹಿಳಾ ನಾಗರಿಕ ಪೆÇಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಹಿಳಾ ನಾಗರಿಕ ಪೆÇಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿಗಳನ್ನು ಹುರಿದುಂಬಿಸಿದರು.


ಮಹಿಳೆಯರು ಪೆÇಲೀಸ್ ಸಮವಸ್ತ್ರ ಧರಿಸಿದ್ದಾಗ ಸಾಕಷ್ಟು ಸವಾಲುಗಳು ಎದುರಿಸಬೇಕಾಗುತ್ತದೆ. ಜೊತೆಗೆ ತ್ಯಾಗಗಳಿಗೂ ಸಿದ್ದರಿರಬೇಕು. ಆದರೆ, ಮಹಿಳೆಯರಿಗೆ ಇರುವ ತಾಳ್ಮೆ, ಪ್ರೇರಣಾಶಕ್ತಿ ಯಾರಿಗೂ ಇಲ್ಲ. ಕರ್ನಾಟಕ ಪೆÇಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಹೆಮ್ಮೆ, ಘನತೆಯ ವಿಚಾರ. ಇಲ್ಲಿ ಪ್ರತಿದಿನ ಕಲಿಕೆ ಇರುತ್ತದೆ. ಈಗ ಮೊದಲಿನಂತೆ ಸಾಮಾನ್ಯ ಪ್ರಕರಣಗಳಿಲ್ಲ. ಸೈಬರ್ ಪ್ರಕರಣಗಳು ಹೆಚ್ಚಳವಿದೆ.ಅದರ ಬಗ್ಗೆಯೂ ಅರಿತುಕೊಳ್ಳಿ ಎಂದು ಸಲಹೆ ನೀಡಿದರು.
ಮಹಿಳೆಯರಿಗೆ ಇರುವ ಆತ್ಮಸ್ತೈರ್ಯ ಯಾರಿಗೂ ಇಲ್ಲ. ನೀವು ಎಲ್ಲವನ್ನು ಮಾಡಬಹುದು. ಠಾಣೆಯ ಪ್ರತಿಯೊಂದು ವಿಭಾಗದಲ್ಲಿ ತೊಡಗಿಸಿಕೊಳ್ಳಿ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ ಎಂದರು.


ಇಲಾಖೆಯಿಂದ ಈಗ ಜನ ಸ್ನೇಹಿ ಪೆÇಲೀಸ್, ಆಸರೆ ಎಂಬ ಅನೇಕ ರೀತಿಯಲ್ಲಿ ಜನರೊಟ್ಟಿಗೆ ಸೇರಿ ಕಾರ್ಯ ನಿರ್ವಹಿಸುವ ಯೋಜನೆಗಳು ಆರಂಭವಾಗಿವೆ ಉತ್ತಮವಾಗಿ ಕೆಲಸ ಮಾಡಿ ಇಲಾಖೆಗೆ ಹೆಮ್ಮೆ ತನ್ನಿ ಎಂದು ಶುಭ ಹಾರೈಸಿದರು.
ಪ್ರಶಸ್ತಿ : ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಧಿಯಾಗಿ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ ಪ್ರಶಸ್ತಿ ಪಡೆದುಕೊಂಡರು. ಒಳಾಂಗಣ ಪ್ರಶಸ್ತಿಯನ್ನು ಮುತ್ತುರವ್ವಾ ಬಾಳಗೌಡ ಪಾಟೀಲ್, ರುಕ್ಮಿಣಿ ಕೃಷ್ಣಪ್ಪ ಪಮ್ಮಾರ ಇಬ್ಬರು ಪ್ರಥಮ, ಎಂ.ಎಸ್.ಅನುಷಾ ದ್ವಿತೀಯ ಪಡೆದುಕೊಂಡಿದ್ದಾರೆ. ಹೊರಾಂಗಣ ಪ್ರಶಸ್ತಿಯಲ್ಲಿ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ ಪ್ರಥಮ, ಎಂ.ಎಸ್.ಅನುಷಾ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.


ಎಸ್.ಎಲ್‍ಆರ್ ಫೈರಿಂಗ್‍ನಲ್ಲಿ ಲಕ್ಷ್ಮೀ ನಂಜಪ್ಪಳವರ ಪ್ರಥಮ, ಎಂ.ಎಸ್.ಅನುಷಾ ದ್ವಿತೀಯ ಪ್ರಶಸ್ತಿ ಪಡೆದಿಕೊಂಡರು. 9ಎಂ.ಎಂ ಪಿಸ್ತೂಲ್ ಫೈರಿಂಗ್‍ನಲ್ಲಿ ಕವಿತಾ ಸುರೇಶ್ ಬರಗಾಂವಿ ಪ್ರಥಮ, ಎ.ಎಸ್.ಸವಿತಾ ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.
ವಿದ್ಯಾರ್ಹತೆ : ಪೆÇಲೀಸ್ ತರಬೇತಿ ಶಾಲೆಯ 10ನೇ ತಂಡದ ಮಹಿಳಾ ನಾಗರಿಕ ಪೆÇಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ 40 ಮಂದಿ ಮಹಿಳಾ ಪೆÇಲೀಸ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ, ಪೆÇಲೀಸ್ ತರಬೇತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಸಿ.ಮಲ್ಲಿಕ್ ಮತ್ತಿತರರು ಉಪಸ್ಥಿತರಿದ್ದರು.