ಕಾಣೆಯಾದ ಅಸ್ವಸ್ಥ ಮಹಿಳೆ ರೇಣುಕಾ ಪತ್ತೆಗೆ ಮನವಿ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಡಿ.01:
– ಪಟ್ಟಣದ ಶ್ರೀ ಮಾತ್ರಶ್ರೀ ಬುದ್ಧಿಮಾಂದ ಮಹಿಳಾ ಅನುವಾಲನ ಕೇಂದ್ರದಲ್ಲಿದ್ದ ಮಾನಸಿಕ ಅಸ್ವಸ್ಥ ರೇಣುಕಾ 43 ವರ್ಷ ಎಂಬ ಮಹಿಳೆ ಕಳೆದ ವಾರದಿಂದ ಕಾಣೆಯಾಗಿದ್ದಾರೆ ಎಂದು ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.


ಮಹಿಳಾ ಬುದ್ಧಿಮಾಂದ್ಯ ಅನುಪಾಲನ ಕೇಂದ್ರ ಕೆ.ಆರ್.ನಗರಕ್ಕೆ ರೇಣುಕಾ ಎಂಬ ಮಾನಸಿಕ ಅಸ್ವಸ್ಥೆ ದಾಖಲಾಗಿದ್ದು, ದಿನಾಂಕ 23.11.2025 ರಂದು ಸುಮಾರು ಮದ್ಯಾಹ್ನ 02:30 ಸಮಯದಲ್ಲಿ.ನಮ್ಮ ಕೇಂದ್ರದ ಕಟ್ಟಡವನ್ನು ನೆಗೆದು ರೇಣುಕಾ ಓಡಿ ಹೋಗಿರುತ್ತಾರೆ, ಇವರು ನಮ್ಮ ಕೇಂದ್ರಕ್ಕೆ ಬಂದ ದಿನದಿಂದ ಸುಮಾರು 04 ಬಾರಿ ನಮ್ಮ ಕೇಂದ್ರದಿಂದ ಓಡಿ ಹೋಗಿರುತ್ತಾರೆ. ಪ್ರತಿಬಾರಿಯು ನಮ್ಮ ಸಂಸ್ಥೆಯವರು ಪಿಲಾ, ಕಡೆ ಹುಡುಕಿ ಕರೆತಂದಿದ್ದಾರೆ, ಆದರೆ ಈ ಬಾರಿ ದಿನಾಂಕ 23.11.2025 ರ ಇಲಿಯವರೆಗೂ ಹುಡುಕಾಡಿದರೂ ಸಿಗದ ಕಾರಣ ಪತ್ತೆ ಮಾಡಿ ಕೊಂಡ ಬೇಕೆಂದು ಸಂಸ್ಥೆಯ ಅಧೀಕ್ಷಕಿ ಕೆ.ಎಸ್.ಶಿವಗಂಗೆ ದೂರು ದಾಖಲಿಸಿದ್ದಾರೆ


ಕಾಣೆಯಾದವರ ಚಹರ ಗುರುತು:- ರೇಣುಕಾ 43 ವರ್ಷ, ಸುಮಾರು 5.3. ಎತ್ತರ ಗೋಧಿ ಬಣ್ಣ, ಕನ್ನಡಭಾಷ್ ಮಾತಾನಾಡುತ್ತಾರೆ ಅವರು ನೀನೆ ಬಣ್ಣದ ರವಿಕೆ ಕೆಂಪು ಲಂಗ, ಬಿಳಿ ಆಂಚಿನ ಕಾಫಿ ಬಣ್ಣದ ಸೀರೆ ಧರಿಸಿರುತ್ತಾರೆ. ಈಕೆಯ ಕೆಳತುಟಿ ಹರಿದು ಹೊಲಿಗೆ ಹಾಕಿರುತ್ತಾರೆ ಮತ್ತು ಕೆಳಭಾಗದ ಹಲುಗಳು ಮುರಿದಿರುತ್ತದೆ, ಒಬ್ಬರೆ ಸುಮ್ಮನೆ ಮಾತಾನಾಡಿಕೊಂಡು ಇರುತ್ತಾರೆ, ಕಣ್ಣು ಹೊಡೆದು ಬಲಭುಜ ಅಲುಗಾಡಿಸಿರುತ್ತಾಳೆ. ಪತ್ತೆಯಾದಲ್ಲಿ ಹತ್ತಿರದ ಪೆÇಲೀಸ್ ಠಾಣೆ ಅಥವಾ ಕೆ.ಆರ್.ನಗರ ಪೆÇಲೀಸ್ ಠಾಣೆಗೆ ದೂರವಾಣಿ : 08223-263666, 9480805036 ಮಾಹಿತಿ ನೀಡ ಬೇಕೆಂದು ಕೋರಲಾಗಿದೆ.