
ಸಂಜೆವಾಣಿ ನ್ಯೂಸ್
ಮೈಸೂರು.ಜ.25:- ಕಾಂಗ್ರೆಸ್ ಸರ್ಕಾರದ ಶಾಸಕ, ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಗೌರವ ಕೊಡದೇ ಗುಂಡಾಗಳ ರೀತಿ ವರ್ತಿಸಿರುವುದು ಖಂಡನೀಯ. ರಾಜಪಾಲರ ಅವಮಾನಿಸಿರುವ ಕಾಂಗ್ರೆಸ್ ನಡೆಯನ್ನು ಖಂಡಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟಿಸಿದರು.
ಬಿಜೆಪಿ ಮೈಸೂರು ನಗರ ಮತ್ತು ಗ್ರಾಮಾಂತರ ಯುವ ಮೋರ್ಚಾ ಘಟಕದವತಿಯಿಂದ ಅಧ್ಯಕ್ಷ ರಾಕೇಶ್ ಗೌಡ ನೇತೃತ್ವದಲ್ಲಿ 50 ಜನರು ಸೇರಿ ಮಾಜಿ ಸಚಿವ ಬಿ.ಕೆ.ಹರಿಪ್ರಸಾದ್ ಹಾಗೂ ಇತರ ಕಾಂಗ್ರೆಸ್ ಶಾಸಕರು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರನ್ನು ವಿಧಾನಸೌಧದಲ್ಲಿ ಅಡ್ಡಗಟ್ಟಿ ಗೂಂಡಾಗಿರಿ ಮೆರೆದು ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಹರಿಪ್ರಸಾದ್ ಹಟಾವೋ ಕರ್ನಾಟಕ ಬಚಾವೋ,ದಿಕ್ಕಾರ ದಿಕ್ಕಾರ ಬಾಲಕೃಷ್ಣನಿಗೆ ದಿಕ್ಕಾರ.ಗುಂಡಾ ವರ್ತನೆ ತೋರಿದ ಕಾಂಗ್ರೆಸ್ ಶಾಸಕರಿಗೆ ದಿಕ್ಕಾರ,ಸಂವಿಧಾನ ಕಗ್ಗೊಲೆ ಮಾಡಿದ ಬಾಲಕೃಷ್ಣ ಗೆ ದಿಕ್ಕಾರ ಎಂಬ ನಾಮಫಲಕವನ್ನು ಹಿಡಿದು ದಲಿತ ರಾಜ್ಯಪಾಲರನ್ನು ಅವಮಾನಿಸಿದ ರಾಜ್ಯ ಸರಕಾರಕ್ಕೆ ದಿಕ್ಕಾರ, ದಲಿತ ವಿರೋಧಿ ಕಾಂಗ್ರೆಸ್ ಗೆ ದಿಕ್ಕಾರ,ರೌಡಿ ಕೊತ್ವಲ್ ಶಿಷ್ಯ ಹರಿಪ್ರಸಾದ್ ಗೆ ದಿಕ್ಕಾರ,ನೀಡಲಿ ನೀಡಲಿ ರಾಜೀನಾಮೆ ನೀಡಲಿ,ಕಾಂಗ್ರೆಸ್ ಗುಂಡಾ ಗಳಿಗೆ ದಿಕ್ಕಾರ, ಜನವಿರೋದಿ ಕಾಂಗ್ರೆಸ್ ಸರಕಾರಕ್ಕೆ ದಿಕ್ಕಾರ,ಸಮರ್ಥನೆ ಮಾಡಿದ ಸಿದ್ದರಾಮಯ್ಯ ಗೆ ದಿಕ್ಕಾರ, ನೀಡಿ ನೀಡಿ ರಾಜೀನಾಮೆ ನೀಡಿ ಎಂಬಿತ್ಯಾದಿ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಮಾತನಾಡಿ, ಮೊನ್ನೆ ನಡೆದ ಅಧಿವೇಶನದಲ್ಲಿ ಆಗಬಾರದ್ದು ಆಗಿದೆ. ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಸಂವಿಧಾನಿಕ ಹುದ್ದೆಗೆ ಅಗೌರವ ತೋರಿಸಿದ್ದಾರೆ.ಅದು ಸಂವಿಧಾನ ಹುದ್ದೆ ಅಂತ ಗೊತ್ತೇ ಇಲ್ಲ.ಬಿ ಕೆ ಹರಿಪ್ರಸಾದ್ ಗೆ ನಿಗಾ ಇರಬೇಕು.ಗುಂಡಾ ರಾಜ್ಯ ಕಟ್ಟಬೇಕು ಅಂದುಕೊಂಡಿದ್ದಾರೆ.ಇದು 1980 ದಶಕ ಅಲ್ಲ ಸ್ವಾಮಿಗಳೇ. ಇದು ವಿಕಾಸಿತ ಭಾರತ.ಕೂಡಲೇ ರಾಜ್ಯಪಾಲರಿಗೆ ಕ್ಷಮೆ ಯಾಚನೆ ಮಾಡಬೇಕು.ಈ ಹಿಂದೆ 18 ಜನ ಶಾಸಕರನ್ನು ಸಸ್ಪೆಂಡ್ ಮಾಡಿದ್ರಿ ಈಗ ಯಾಕೆ ಸುಮ್ಮನೆ ಕುಳಿತಿದ್ದೀರಿ.ಸಿಎಂ ಸಿದ್ದರಾಮಯ್ಯರವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ಸಾಹೇಬರು ಮೈಸೂರನ್ನು ಮರೆತು ಕುಳಿತಿದ್ದಾರೆ. ಬಳ್ಳಾರಿ ಶಾಸಕ ಭರತ್ ರೆಡ್ಡಿ ಮಾಡೇ ಮಾಡುತ್ತೇನೆ.ಹೊಡೆದೆ ತಿರುತ್ತೇನೆ ಅಂತಾರೆ.ಭರತ್ ರೆಡ್ಡಿ ಗುಂಡಾ ರಾಜ್ಯ ಮಾಡಲು ಹೊರಟಿದ್ದೀರಾ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು.
ಗ್ರಾಮಾಂತರ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ,ನಗರ ಅಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಸೋಮಶೇಖರ್, ಚಂದ್ರಶೇಖರ ದಾರಿಪುರ, ಕಾರ್ತಿಕ್ ಮರಿಯಪ್ಪ, ಗೋಕುಲ್ ಗೋವರ್ಧನ್, ರುದ್ರಸ್ವಾಮಿ, ಜೋಗಿ ಮಂಜು, ರಾಕೇಶ್ ಭಟ್ ಹಾಗೂ ಇತರರು ಇದ್ದರು.



























