ಕಾಂಗ್ರೆಸ್ ತೊರೆದು ಅಧಿಕೃತವಾಗಿ ಜೆಡಿಎಸ್‍ಗೆ ಸೇರ್ಪಡೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜ.23:-
ತಾಲ್ಲೂಕಿನಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ, ಅಧಿಕಾರಿಗಳು ಜನಸಾಮಾನ್ಯರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಸಮಸ್ಯೆಗಳನ್ನು ಕೇಳುತ್ತಿಲ್ಲ ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಿಲ್ಲ ತಾಲ್ಲೂಕಿನ ಕುರುಬಹಳ್ಳಿ ಗ್ರಾಮದ ಕೆಲ ಮುಖಂಡರು, ಯುವಕರು ಕಾಂಗ್ರೆಸ್ ಪಕ್ಷದಿಂದ ಬೇಸತ್ತು ಮಾಜಿ ಸಚಿವ ಸಾ.ರಾ.ಮಹೇಶ್ ಸಮುಖದಲ್ಲಿ ಜೆಡಿಎಸ್ ಸೇರ್ಪಡೆ ಸಮಾರಂಭದಲ್ಲಿ ಶಾಸಕ.ಡಿ.ರವಿಶಂಕರ್ ವಿರುದ್ಧ ಆರೋಪಿಸಿದರು.


ಕುರುಬಹಳ್ಳಿ ಗ್ರಾಮದ ಕುರುಬ ಸಮುದಾಯದ ಮೂವತ್ತೈದಕ್ಕೂ ಹೆಚ್ಚು ಮುಖಂಡರು, ಯುವಕರು ಕಾಂಗ್ರೆಸ್ ತೊರೆದು ಇಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡರು.
ಸಾಲಿಗ್ರಾಮ ತಾಲೂಕು ಕೇಂದ್ರವಾಗಿದೆ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ,, ಆಸ್ಪತ್ರೆ ಬಗ್ಗೆ ಶಾಸಕರಿಗೆ ಕರೆ ಮಾಡಿದರೆ ಮೊಬೈಲ್ ಪೆÇೀನ್ ಸ್ವಿಚ್ ಆಫ್ ಮಾಡಿ ಕೊಳ್ಳುತ್ತಾರೆ, ನಾವು ಓಟ್ ಹಾಕಿದ್ದೇವೆ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವ ಹಕ್ಕಿದೆ ಆದರೂ ಸರಿಯಾಗಿ ಸ್ಪಂದಿಸದ ಕಾರಣದಿಂದಾಗಿ ನಾವೆಲ್ಲ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದೇವೆ ಎಂದು ಗ್ರಾಮದ ನಾಗೇಶ್, ಚಂದ್ರು, ತಿಮ್ಮೇಗೌಡ ಸೇರ್ಪಡೆ ಸಮಾರಂಭದಲ್ಲಿ ಆರೋಪಗಳ ಸುರಿಮಳೆಗೈದರು.


ಒಳ್ಳೆಯ ಶಾಸಕರೆಂದು ನಂಬಿದಾಗಿದೆ, ಕುರುಬಹಳ್ಳಿ ಗ್ರಾಮಕ್ಕೆ ಮೂರು ವರ್ಷಗಳ ಅವದಿಯಲ್ಲಿ ಹಬ್ಬದ ಕಾರ್ಯಕ್ರಮಕ್ಕೆ ಬಿಟ್ಟರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ರಸ್ತೆ, ಚರಂಡಿ ಯಾವೊಂದು ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಇದರಿಂದಾಗಿ ನಾವುಗಳು ಮಾಜಿ ಸಚಿಎ ಸಾ.ರಾ.ಮಹೇಶ್ ಅಣ್ಣ ಅವರು ಶಾಸಕರಾಗಿದ್ದ ವೇಳೆ ಹದಿನೈದು ವರ್ಷಗಳಲ್ಲಿ ಅಧಿಕಾರಿಗಳು ಈ ರೀತಿ ನಡೆದು ಕೊಂಡಿಲ್ಲ, ಅಧಿಕಾರಿಗಳು ಮಹೇಶಣ್ಣ ಅವರಿಗೆ ಹೆದರುತ್ತಿದ್ದರು. ಇವಾಗ ಅಧಿಕಾರಿಗಳಿಗೆ ಯಾವ ಹೆದರಿಕೆ ಇಲ್ಲದಂತಾಗಿದೆ ದೂರಿದರು.
ಒಂದು ಚಿಕ್ಕ ಮಗುವಿನ ಆಧಾರ್ ಕಾರ್ಡ್ ಮಾಡಿಸಲು ಬೆಳಗ್ಗೆಯಿಂದ ಸಂಜೆವರೆಗೂ ಕಾದರೂ ಪ್ರಯೋಜವಾಗುತ್ತಿಲ್ಲ, ಇನ್ನೂ ತಾಲೂಕು ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ ತಪ್ಪಿಲ್ಲ , ಇನ್ನೂ ಕೆಇಬಿ ಕಚೇರಿಯಲ್ಲಿ ಹಣ ನೀಡಿದರೆ ಮಾತ್ರ ಕೆಟ್ಟು ಹೊದ ವಿದ್ಯುತ್ ಪರಿವರ್ತಕಗಳನ್ನು ರಿಪೇರಿ ಮಾಡಿಸುತ್ತಾರೆ ಇದು ಸಾಲಿಗ್ರಾಮ ತಾಲ್ಲೂಕಿನ ವ್ಯವಸ್ಥೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಎಳೆ ಎಳೆಯಾಗಿ ತಿಳಿಸಿದರು.