
ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ9:ಕಳೆದ 70 ವರ್ಷಗಳಿಂದಲೂ ದಲಿತರನ್ನು ವೋಟು ಬ್ಯಾಂಕ್ ಆಗಿ ಬಳಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ, ಈಗಾಲದರೂ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಛಲವಾದಿ ಬಲಗೈ ಸಮಾಜದ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಡಾ ಜಿ.ಪರಮೇಶ್ವರ್ ಹಾಗೂ ಎಸ್.ಸಿ.ಮಹಾದೇವಪ್ಪ ಇಬ್ಬರಲ್ಲಿ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮತ್ತಿಹಳ್ಳಿ ಕೆಂಚಪ್ಪ ಹಾಗೂ ಸಿ.ರಮೇಶ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಸಚಿವ ಡಾ: ಪರಮೇಶ್ವರ್ ಹಾಗೂ ಎಸ್.ಸಿ.ಮಹಾದೇವಪ್ಪ ಈ ಇಬ್ಬರೂ ನಾಯಕರು, ಸುಧೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಡಾ: ಜಿ.ಪರಮೇಶ್ವರ್ ಸತತ 8 ವರ್ಷ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇವರು ಮುಖ್ಯಮಂತ್ರಿ ಹುದ್ದೆಗೆ ಏರುವ ಅವಕಾಶ ಹಲವು ಬಾರಿ ತಪ್ಪಿ ಹೋಗಿದೆ. ಈ ವಿಚಾರದಲ್ಲಿ ಕಾಂಗ್ರೇಸ್ ಹೈಕಮಾಂಡ್ ನಿರ್ಲಕ್ಷ ತೋರಿದೆ ಎಂದು ದೂರಿದರು.
ಪರಿಶಿಷ್ಟ ಜಾತಿಯ ಬಲಗೈ ಸಮುದಾಯವು ಕಾಂಗ್ರೇಸ್ ಪಕ್ಷಕ್ಕೆ ನಿಷ್ಟವಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರನ್ನು ಪಕ್ಷಕ್ಕೆ ನೀಡಿದ ಸಮುದಾಯವ ಕಾಂಗ್ರೇಸ್ ಬೆನ್ನೆಲುಬಾಗಿ ನಿಂತಿದೆ. ಸಮುದಾಯದ ನಾಯಕರಿಗೆ ಪಕ್ಷದ ಸ್ಥಾನಮಾನಗಳು ಇನ್ನು ಹೊರತು ಸಂವಿಧಾನಿಕ ಹುದ್ದೆ ಸರಿಯಾಗಿ ದೊರೆತಿಲ್ಲ ಸಂವಿಧಾನಿಕ ಹುದ್ದೆಗಳ ವಿಚಾರದಲ್ಲಿ ಸಮುದಾಯಕ್ಕೆ ದೊಡ್ಡಮಟ್ಟದ ಅನ್ಯಾಯವಾಗಿದೆ ಎಂದು ಅಸಮಧಾನ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದರೂ ಛಲವಾದಿ ಬಲಗೈ ಸಮುದಾಯದ ಒಬ್ಬ ನಾಯಕರಿಗೂ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ.
ಈಗ ಎರಡೂವರೆ ವರ್ಷದ ಅವಧಿಗಾದರೂ ಅವಕಾಶ ಮಾಡಿಕೊಟ್ಟು ಛಲವಾದಿ ಬಲಗೈ ಋಣ ತೀರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರಂಭದಿಂದಲೂ ಛಲವಾದಿ ಬಲಗೈ ಸಮುದಾಯವು ಕಾಂಗ್ರೇಸ್ ಪಕ್ಷಕ್ಕೆ ಬೆನ್ನಿಗೆ ನಿಂತಿದೆ. ಪಕ್ಷದಿಂದ ಹೆಚ್ಚಿನ ಶಾಸಕರು ವಿಧಾನ ಸಭೆಗೆ ಆಯ್ಕೆಯಾಗಿದ್ದರೂ ರಾಜ್ಯದಲ್ಲಿ ಇದುವರೆಗೂ ಛಲವಾದಿ ಬಲಗೈ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ಈಗ ಕಾಲ ಕೂಡಿ ಬಂದಿದೆ. ಹಿರಿಯ ಅನುಭವಿ ರಾಜಕಾರಣಿ ಸಚಿವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಸಿ.ನರಸಪ್ಪ, ವೀರಭದ್ರಪ್ಪ, ಅಜ್ಜಯ್ಯ ಹೊಟ್ಟೇರ್. ಸಿ.ಡಿ.ಈರಣ್ಣ, ಸಿ.ಕೆ.ಹನುಮಂತಪ್ಪ ಹಾಗೂ ವೆಂಕಟೇಶ್ ಇತರರು ಪಾಲ್ಗೊಂಡಿದ್ದರು.




























