ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17: ಕಲ್ಯಾಣ ಕರ್ನಾಟಕದ ವಾರ್ಷಿಕೋತ್ಸವವನ್ನು ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದ ಮೊದಲನೇ ಗೇಟ್ ಹತ್ತಿರ ನಿರ್ಮಿಸಲಾದ ದ್ವಜಸ್ತಂಭವನ್ನು ಭಾವೈಕ್ಯತೆಯ ಪ್ರತೀಕವಾಗಿ ಪಾಲಿಕೆಯ ಮಹಾ ಪೌರರಾದ ಮುಲ್ಲಂಗಿ ನಂದೀಶ್,ಪಾಲಿಕೆ ಸದಸ್ಯ ಪಿ.ಗಾಡೆಪ್ಪ,ಸಮಿತಿಯ ಸಂಸ್ಥಾಪಕರಾದ ಪಿ.ಎಂ. ಈಶ್ವರಪ್ಪ,ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷರಾದ ಕೊಳಗಲ್ಲು ಯು.ಎರ್ರಿಸ್ವಾಮಿ ,ಅವರು ದ್ವಜಾರೋಹಣ ನೆರವೇರಿಸಿ ಪ್ರಾದೇಶಿಕ ಹೋರಾಟದ ಮಹತ್ವವನ್ನು ಉಲ್ಲೇಖಿಸಿದರು.
ಸಂಘಟನೆಯ ಹಿರಿಯರು, ಪದಾಧಿಕಾರಿಗಳು, ಯುವಕರು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದ ಸಂಭ್ರಮವನ್ನು ಹಂಚಿಕೊಂಡರು.
ದ್ವಜಸ್ತಂಭದ ಉದ್ಘಾಟನೆಯೊಂದಿಗೆ ವಾರ್ಷಿಕೋತ್ಸವದ ಕಾರ್ಯಕ್ರಮಗಳು ವಿವಿಧ ಸಾಂಸ್ಕೃತಿಕ,ಸಾಹಿತ್ಯಿಕ ಹಾಗೂ ಜಾಗೃತಿ ಚಟುವಟಿಕೆಗಳ ಮೂಲಕ ಮುಂದುವರಿಯಲಿದ್ದು, ಬಳ್ಳಾರಿ ನಗರದಾದ್ಯಂತ ಉತ್ಸವದ ಸಡಗರ ವಾತಾವರಣ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಯು.ರಮೇಶ್ ಕುಮಾರ್,ಕಾನೂನು ಸಲಹೆಗಾರರಾದ ಎಸ್.ರಂಗಸ್ವಾಮಿ, ಜಿಲ್ಲಾ ಗೌರವ ಅಧ್ಯಕ್ಷರಾದ ಯು.ಶಿವಮೂರ್ತಿ,ನಗರ ಅಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರಾದ ಬಿ.ಹುಲು ಗಪ್ಪ, ಯೂಟ್ಯೂಬ್ ಅಧ್ಯಕ್ಷರಾದ ಸುರೇಶ್ ನಾಯಕ್, ಸೇರಿದಂತೆ ಇನ್ನಿತರರಿದ್ದರು.

























