(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.01: ಕರ್ನಾಟಕದ ಏಕೀರಕರಣಗೊಂಡು 69 ವರ್ಷ ಆದರೂ ಕಲ್ಯಾಣ ಕರ್ನಾಟಕಕ್ಕೆ ಮಲತಾಯಿ ಧೋರಣೆ ನಿಂತಿಲ್ಲ. ಶಿಕ್ಷಣ ಕ್ಷೇತ್ರ, ನೀರಾವರಿ, ವಿದ್ಯುತ್, ಕೃಷಿ, ಸಾರಿಗೆ, ರಸ್ತೆ ಅಭಿವೃದ್ಧಿ, ಉದ್ಯೋಗ, ಆರೋಗ್ಯ ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ ಧೋರಣೆ ಬಿಡಬೇಕು ಎಂದು ಕನ್ನಡ ನಾಡು ರೈತ ಸಂಘ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಸಂಘದ ಅಧ್ಯಕ್ಷ ಮೆಣಸಿನ ಈಶ್ವರಪ್ಪ ಮತ್ತವರ ಕಾರ್ಯಕರ್ತರು. ಕಲ್ಯಾಣ ಕರ್ನಾಟಕದ ರಾಜ್ಯದಲ್ಲಿನ ಬಳ್ಳಾರಿ ಸೇರಿದಂತೆ ಏಳು ಜಿಲ್ಲೆಗಳು
ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಹಿಂದೆ ಉಳಿದಿದೆ 63.71% ಸಾಕ್ಷಾರತ ಹೊಂದಿವೆ. ನಮ್ಮ ಶಾಲಾ ಕಾಲೇಜ್ ಗಳು, ಕಟ್ಟಡಗಳು, ಶೀತಲ ವ್ಯವಸ್ಥೆ ತಲುಪಿವೆ. ಕೆಲವು ಹಳ್ಳಿಗಳಲ್ಲಿ ಕಟ್ಟಡಗಳು ಇಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕಾಲೇಜ್ಗಳಲ್ಲಿ ಪ್ರಾಧ್ಯಾಪಕರ ಕೊರತೆ ಇದೆ.
ಈ ಭಾಗದ ಕಾಲುವೆಗಳಿಗೆ ನೀರಿಗಿಂತ ಹಣವೆ ಹೆಚ್ಚು ಹರಿದಿದೆ. ಇಂದಿಗೂ ನಮ್ಮ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯುವುದಿಲ್ಲ ಇಂದಿಗೂ ಹಲವು ಹಳ್ಳಿಗಳಲ್ಲಿ ನೀರಿನ ಬರ ಇದೆ.
ನಮ್ಮ ಕಲ್ಯಾಣ ಕರ್ನಾಟಕದ ಬೀದರ್ ನಲ್ಲಿ ಬೆಂಗಳೂರಿನ ಹವಾಗುಣ ಇದ್ದರು ಬಿದರ್ನಿಂದ ಹೈದ್ರಾಬಾದ್ಗೆ 145 ಕಿಲೋ ಮೀಟರ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ಇದ್ದರು ಐಟಿ.ಬಿಟಿ ಕಂಪನಿಗಳನ್ನು ಸ್ಥಾಪಿಸಲು ಮುಂದಾಗಿಲ್ಲ.
ಬಳ್ಳಾರಿಯಲ್ಲಿ ರೈತರಿಂದ ಭೂಮಿ ವಶಪಡಿಸಿಕೊಂಡಿದ್ದರು ಏರ್ಪೋರ್ಟ್ ಸ್ಥಾಪನೆ ಮಾತ್ರ ಆಗುತ್ತಿಲ್ಲ.
ನಮ್ಮ ಕಲ್ಯಾಣ ಕರ್ನಾಟಕದ ಎಂ.ಎಲ್.ಎ, ಎಂ.ಎಲ್.ಸಿ, ಮಂತ್ರಿಗಳು ಪಕ್ಷಬೇದ ಮರೆತು ಈ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದಲ್ಲಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.






















