
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.21: ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರ್ವಹಿಸಲು ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಶನ್ ಸದಾಕಾಲ ಸಿದ್ದರೆಂದು ಅಸೋಸಿಯೇಶನ್ ಗೌರವ ಅಧ್ಯಕ್ಷ ಶಿಲಾ ಬ್ರಹ್ಮಯ್ಯ ಹೇಳಿದ್ದಾರೆ
ನಗರದ ಖಾಸಗಿ ಹೊಟೇಲ್ ಸಭಾ ಭವನದಲ್ಲಿ ಹಮ್ಮಿಕೊಂಡ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಂಘವು ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ಸಾಂಸ್ಕ್ರುತಿಕ, ಸಾಮಾಜಿಕ ,ಧಾರ್ಮಿಕ, ಕಾರ್ಯ ನಿರ್ವಹಿಸಲು ತೀರ್ಮಾನಿಸಿದರು.
2026ನೇ ಯುಗಾದಿ ಪಂಚಾಂಗ ಶ್ರವಣವನ್ನು ಪಂಚಾಂಗ ಕರ್ತ ಪಂಡಿತ್ ಗುರುಪ್ರಸಾದ್ ಅವರಿಂದ ನಡೆಸಲು ಒಪ್ಪಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮೇಯರ್ ಪೂಜಾರಿ ಗಾದೆಪ್ಪ , ಬಳ್ಳಾರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯು. ವೆಂಕಟೇಶ್ ಹಾಗು ಸಂಸ್ಥೆಯ ಅಧ್ಯಕ್ಷ ಯಶ್ವಂತ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಡಾ.ಮಲ್ಲೇಶ್, ರಾಮ್ ಕಿರಣ್, ಎಸ್.ಪಿ.ವೆಂಕಟೇಶ್ ಅವರು ತಮ್ಮ ಸಲಹ ನೀಡಿದರು. ಏಪ್ರಿಲ್ ನಿಂದ ಡಿಸೆಂಬರ್ ವರಿಗೆ ನೆಡೆದ ಕಾರ್ಯಕ್ರಮದ ವೆಚ್ಚದ ಬಗ್ಗೆ ತಿಳಿಸಿದರು.
ನಾಗಭೂಷಣ್ ಅವರಿಂದ ಪ್ರಾರ್ಥನೆ, ರಾಮಚಂದ್ರ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ, ರಾಮಮೂರ್ತಿ, ಶಿವಾಜಿರಾವು, ಚಿದಾನಂದ, ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು

























