
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.26: ಕಾವ್ಯಕಲಾ ಟ್ರಸ್ಟ್ ಅವರ ಸುಧೀರ್ಘ ಕಾರ್ಯ ಚಟುವಟಿಕೆ ಮನಗೊಂಡು ಇಲಾಖೆಯು ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಕಲಾ ಉತ್ತೇಜನೆಗಾಗಿ ಪೋಷಣೆಗಾಗಿ ಇಲಾಖೆ ಧನಸಹಾಯ ನೀಡಿದ್ದು, ಹಳ್ಳಿ, ಪಟ್ಟಣ, ನಗರದ ಧಾರ್ಮಿಕ ದೇವಸ್ಥಾನಗಳಲ್ಲಿ ಆಯೋಜಿಸಿ ಕಲಾಪೋಷಣೆ ಮಾಡುವದೇ ಧನ ಸಹಾಯದ ಮುಖ್ಯ ಉದ್ದೇಶವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಹೇಳಿದರು.
ಕುಡಿತಿನಿ ಪಟ್ಟಣದಲ್ಲಿ ಕಾವ್ಯಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿ.ವೀಣಕುಮಾರಿಯವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ರಂಗಭೂಮಿಯಲ್ಲಿ ನಟಿಸಿ ನೃತ್ಯ ಗುರುಗಳಾಗಿ ಕಲಾ ಪ್ರಪಂಚಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ಅನುಭವ ಮತ್ತು ಮಾರ್ಗದರ್ಶನ ನಿಮ್ಮೆಲ್ಲರಿಗೆ ಇಂತಹ ಕಾರ್ಯಕ್ರಮದ ಮುಖಾಂತರ ದೊರೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖಂಡರಾದ ಗ್ಯಾಂಗಿ ಹನುಮಂತಪ್ಪ, ಆಲಪ್ಪ, ಯು. ತಿಮ್ಮಯ್ಯ, ತೋಟೇಶಪ್ಪ , ಎಸ್ ಮೂರ್ತೆಪ್ಪ, ಹನುಮನ ಗೌಡ, ನಾಗಭೂಷಣಪ್ಪ, ಚಿತ್ತೊಡಗಿ ಶೀನಪ್ಪ,
ತೋಟೇಶಪ್ಪನವರ ಸ್ವಾಮಿ, ಕಾಟೆವೆಂಕಟೇಶ, ಕೊಟಾಲ್ ಎರ್ರಿಸ್ವಾಮಪ್ಪ, ಎಸ್ ಹೆಚ್ ಕೆ ಮೌಲಾಸಾಬ್, ಮಾಡಿವಾಳರ ಹುಸೇನಪ್ಪ, ಅಂಬಳಗಿ ನಾಗಣ್ಣ, ಗುಡ್ಡದ ಕೋಲು ವೀರನ ಗೌಡ, ಉಪ್ಪಾರಳ್ಳಿ ನಾಗರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾವ್ಯ ಕಲಾ ಟ್ರಸ್ಟ್ ಅಧ್ಯಕ್ಷೆ ಬಿ.ವೀಣಾ ಕುಮಾರಿ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿ ಜ್ಯೋತಿ ಕೂಡ್ಲಿಗಿ .ಅವರಿಂದ ರಂಗಗೀತೆಗಳ ಗಾಯನ ನಡೆಯಿತು.
ಕಂಪ್ಲಿ ಕೆ. ಈರಣ್ಣ ಅವರಿಂದ ಬಯಲಾಟ ಮುಮ್ಮೇಳ ಪದಗಳು ನಡೆದವು.
ಭರತನಾಟ್ಯ ಶ್ರೇಯಾ ಬಳ್ಳಾರಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಕೆ. ಅಶೋಕ ಕುಡಿತಿನಿ ಅವರಿಂದ ತತ್ವಪದ ಗಾಯನ, ಕುಡಿತಿನಿ ಟಿ. ಹೊನ್ನೂರಸ್ವಾಮಿ ಅವರಿಂದ ಭಾರ್ಗವರಾಮ ಬಯಲಾಟ ಪ್ರದರ್ಶನ ನಡೆಯಿತು.

























