
ಸಂಜೆವಾಣಿ ವಾರ್ತೆ
ಹನೂರು ಜು 6 :- ಕರ್ನಾಟಕ ಮೀಡಿಯಾ ಕ್ಲಬ್ 2024/25ನೇ ಸಾಲಿನ ರಾಜ್ಯ ಮಟ್ಟದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ ಕರ್ನಾಟಕ ಭೂಷಣ ಪ್ರಶಸ್ತಿಗೆ ರೈತರಾದ ಎನ್. ರವಿಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ರೈತ ಎನ್. ರವಿಕುಮಾರ್ (ರಂಗಸ್ವಾಮಿ) ಅವರು ಕೃಷಿ ಕ್ಷೇತ್ರದಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಜನಪರ ಕಾಳಜಿ, ಆದರ್ಶ ಬದುಕಿಗಾಗಿ “ಕರ್ನಾಟಕ ಭೂಷಣ” ಪ್ರಶಸ್ತಿ ಮತ್ತು ಬಿರುದು ನೀಡಿ ಸನ್ಮಾನಿಸಲು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಭೂಷಣ ಪ್ರಶಸ್ತಿಯು ನಿಮ್ಮ ಸಾಧನೆ ಮತ್ತು ವ್ಯಕ್ತಿತ್ವಕ್ಕೆ ಕನ್ನಡ ನಾಡಿನ ಸಮಸ್ತ ಜನತೆಯ ಪರವಾಗಿ ನೀಡಿದ ಬಿರುದಾಗಿದ್ದು ಈ ಕನ್ನಡಿಗರ ಹೆಮ್ಮೆಯ ಕಿರೀಟವನ್ನು ನಿಮ್ಮ ಮುಡಿಗೇರಿಸಲು ನಾಡಿನ ಖ್ಯಾತನಾಮ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿತವಾಗಿ ಸನ್ಮಾನಿಸಲಾಗುತ್ತದೆ.
ಕರ್ನಾಟಕ ಮೀಡಿಯಾ ಕ್ಲಬ್‍ನ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ 2ನೇ ಆವೃತ್ತಿ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 08/07/2025 ರ ಮಂಗಳವಾರ ಸಂಜೆ 3.00 ಗಂಟೆಗೆ ಪೂಜ್ಯನೀಯಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ.ಬಸವ ರಮಾನಂದ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ರಾಜ್ಯದ ಖ್ಯಾತ ಸಚಿವ ಸಂಪುಟದ ಸಚಿವರು, ಖ್ಯಾತ ಚಲನಚಿತ್ರ ನಟ-ನಟಿಯರು, ಖ್ಯಾತ ಸಾಹಿತಿಗಳು, ಉನ್ನತ ಅಧಿಕಾರಿಗಳು ಸೇರಿದಂತೆ ಗಣ್ಯಾತಿಗಣ್ಯ ಅತಿಥಿಗಳ ಅಮೃತ ಹಸ್ತದಿಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.