ಕರ್ನಾಟಕ ಭೂಷಣ ಪುರಸ್ಕೃತ ಆಲಗೂಡು ಚಂದ್ರಶೇಖರ್ ಗೆ ಸನ್ಮಾನ

ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.4-
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಬಳಿಯಿರುವ ಲಿಂಕ್ ರಸ್ತೆಯಲ್ಲಿ ಇತ್ತೀಚೆಗೆ ಕಾರು ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ವಾದ)ಯ ರಾಜ್ಯ ವಿಭಾಗೀಯ ಸಂಚಾಲಕ ಡಾ.ಆಲಗೂಡು ಎಸ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.


ತಾಲೂಕಿನಲ್ಲಿ ಹಲವು ದಶಕಗಳಿಂದಲೂ ದಲಿತರು ಹಾಗೂ ನೊಂದವರ ಪರ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟವನ್ನು ನಡೆಯುತ್ತಾ ಎಲ್ಲಾ ಜನ ಸಮುದಾಯದವರ ಮೆಚ್ಚುಗೆಗೆ ಪಾತ್ರರಾಗಿರುವ ಆಲಗೂಡು ಎಸ್.ಚಂದ್ರಶೇಖರ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಸೇರಿದಂತೆ ಭಾರತ್ ಜ್ಯೋತಿ ಹಾಗೂ ಇನ್ನಿತರ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದರು. ಇತ್ತೀಚೆಗೆ ಕರ್ನಾಟಕ ಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಎಲ್ಲರಿಂದಲೂ ಸನ್ಮಾನವನ್ನು ಸ್ವೀಕರಿಸುತ್ತಿದ್ದಾರೆ.


ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕಾರ್ ಮಲ್ಲಪ್ಪ, ಚಾಲಕರುಗಳಾದ ರಾಜಣ್ಣ, ಶ್ರೀನಿವಾಸ್ ಗೌಡ, ಸೋಮಣ್ಣ ಮಾವಿನಹಳ್ಳಿ, ಚಂದ್ರು, ಶಂಕರ್, ಮಂಜು, ಪೀಟರ್, ಸ್ವಾಮಿ , ರವಿ, ರಾಜೇಶ, ಆನಂದ. ಕುಮಾರ ಹಾಗೂ ಇತರರು ಇದ್ದರು.