
ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.02- ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವ ನಾಡಹಬ್ಬವಾಗಿದೆ. ಕನ್ನಡ ಭಾμÉಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತ, ಕನ್ನಡ ಭಾμÉಯ ಉಳಿವಿಗಾಗಿ ಬಹಳಷ್ಟು ಮಹಾನೀಯರು ಹೋರಾಟಗಳನ್ನು ಮಾಡಿದ್ದಾರೆ. ಭಾರತ ಮಾತೇಯ ಮಡಿಲಿಲ್ಲಿ ಹಲವಾರು ಭಾμÉಗಳು ಇದೆ. ಕರ್ನಾಟಕದಲ್ಲಿ ಕನ್ನಡ ಭಾμÉಗೆ ಮಾತ್ರ ಪ್ರಮುಖ್ಯತೆ ಕನ್ನಡಕ್ಕೆ ಕವಿಗಳು, ಸಾಹಿತಿಗಳ ಕೊಡುಗೆ ಹೆಚ್ಚು ಇದೆ. ನಮ್ಮ ಭಾμÉ ನಮ್ಮ ನೆಲ ನಮ್ಮ ಭೂಮಿ ಎಂದು ನಮ್ಮಲ್ಲಿ ಪ್ರೀತಿ ಬರಬೇಕು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಂ. ರುದ್ರಮೂರ್ತಿ ಮಾತನಾಡಿ, ಕನ್ನಡ ಭಾμÉಗೆ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳು ಲಬಿಸಿದೆ. ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಅನಂತಮೂರ್ತಿ ಹಾಗೂ ಇನ್ನು ಹಲವಾರು ಕವಿಗಳು ಬರವಣಿಗೆಯ ಮೂಲಕ ಕನ್ನಡ ಭಾμÉಯನ್ನು ಶಿಖರಕ್ಕೆ ಏರಿಸಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಬೇರೆ ಭಾμÉಗಳನ್ನು ಪ್ರೀತಿಸಿ ಕನ್ನಡ ಭಾμÉಯನ್ನು ಗೌರವಿಸಿ ಎಂದು ತಿಳಿಸಿದರು.
ಹೊರದೇಶಗಳಲ್ಲೂ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ. ಜ್ಞಾನವನ್ನು ಬೆಳಸಿಕೊಳ್ಳಲು ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುವುದನ್ನು ರೂಡಿಸಿಕೊಳ್ಳಬೇಕು. ನಮ್ಮ ರಾಜ್ಯದಲ್ಲಿ ಬೇರೆ ಭಾμÉಗಳಿಗೂ ಮಹತ್ವವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂದಭದಲ್ಲಿ ಸಂಸ್ಥೆಯ ನಿರ್ದೇಶಕ ಮಹೇಶ್.ಎಸ್, ಶಾಲೆಯ ಮುಖ್ಯಶಿಕ್ಷಕಿ ರತ್ನಮ್ಮ, ದೈಹಿಕ ಶಿಕ್ಷಕ ರಂಗಸ್ವಾಮಿ, ಶಿಕ್ಷಕರಾದ ಕುಮಾರ್, ಯಶ್‍ಪಾಲ್, ಪರಶಿವಮೂರ್ತಿ, ಮಂಜುಳ ಹಾಗೂ ನಿವೃತ್ತ ಮುಖ್ಯ ಶಿಕ್ಷಕÀ ರಂಗಸ್ವಾಮಿ ಹಾಗೂ ವೀರಣ್ಣ, ಸಿ.ಆರ್.ಪಿ ಶಿವಕುಮಾರ್ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಇನ್ನು ಮುಂತಾದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿದ ನಾಗರಾಜು ಅವರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ಅವರು ಗೌರವಿಸಿ ಸನ್ಮಾನಿಸಿದರು.
ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.


























