
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ,24-ವರ್ಲ್ಡ್ ಟ್ರೇಡಿಷನಲ್ ಶೊಟೊಕಾನ್ ಕರಾಟೆ ಪೆಡೆರೇಷನ್ ಅಪ್ ಇಂಡಿಯಾ ಹಾಗೂ
ಟ್ರಡಿಷನಲ್ ಕರಾಟೆ ಅಕಾಡೆಮಿ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಕರಾಟೆ ಬೆಲ್ಟ್ ಪರೀಕ್ಷೆಯನ್ನು ನಗರದ ನಂದಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು
ಸದರಿ ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿಯ ಬಳ್ಳಾರಿ ನಗರದ ವಿವಿಧ ಶಾಲೆಗಳಲ್ಲಿ ತರಬೇತಿ ಪಡೆಯುತ್ತಿರುವ ಸುಮಾರು 200 ಕ್ಕೂ ಹೆಚ್ಚು ಕರಾಟೆ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಭಾಗವಹಿಸಿದರು, ಕರಾಟೆಯ ಬೆಲ್ಟ್ ಪರೀಕ್ಷೆಯಲ್ಲಿ ದೈಹಿಕ ವ್ಯಾಯಾಮ ಹಾಗೂ ದೈಹಿಕ ಸಾಮರ್ಥ್ಯ ಕಿಹಾನ್ ಮತ್ತು ಕಟಾ ಕೌಶಲ್ಯಗಳನ್ನು ಪ್ರದರ್ಶಿಸಿ ದರು ಬೆಲ್ಟ್ ಮುಖ್ಯ ಪರೀಕ್ಷರಾಗಿ WTSKF ನ ಸೆನ್ಸಾಯಿ ಕಟ್ಟೆಸ್ವಾಮಿ ಹಾಗೂ ಸೆನ್ಸಾಯ್ ಸುಭಾಷ್ ಚಂದ್ರ, ನಡೆಸಿಕೊಟ್ಟರು.
ನಂತರ ಬೆಲ್ಟ್ ವಿತರಣಾ ಮಾಡಿ ಮಾತನಾಡಿದ ಹಿರಿಯ ಕರಾಟೆ ತರಬೇತುದಾರರಾದ ಕಟ್ಟೇಸ್ವಾಮಿ ಕರಾಟೆ ತರಬೇತಿಯನ್ನು ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಈಗಾಗಲೇ, ICSE, CBSE, STATE SYLLABUS, ಶಾಲೆಗಳಲ್ಲಿ ಕಡ್ಡಾಯ ಮಾಡಿದ್ದು ಸಂತೋಷದ ವಿಷಯ ಈ ಕರಾಟೆ ತರಬೇತಿಯು ವಿಶೇಷವಾಗಿ ಹೆಣ್ಣುಮಕ್ಕಳ ಆತ್ಮ ರಕ್ಷಣೆ ಜೊತೆ ದೈಹಿಕ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಹ ಪರೀಕ್ಷಕರಾಗಿ ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿಯ ಕರಾಟೆ ತರಬೇತುದಾರರಾದ ನಾಣ್ಯ ನಾಯಕ್, ಆನಂದ್ , ರಿಜ್ವಾನಮೋಹಿನ್, ಮಾರೇಶ್, ನಾಗರಾಜ್, ಕುಮಾರಸ್ವಾಮಿ, ವಾಸೀಮ್ ಅಕ್ರಮ್, ಉದಯ ಕುಮಾರ್, ಪರೀಕ್ಷೆ ನೆಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಹಿರಿಯ ಕರಾಟೆ ತರಬೇತುದಾರರು. ಜಡೇಶ್, ಹುಲುಗಣ್ಣ, ಪ್ರಸಾದ್, ಹನುಮಂತ, ನಾಗರಾಜ್, ಸಂತೋಷ್, ಸೋಮಶೇಖರ್ , ಹರಿಪ್ರಸಾದ್, ಪ್ರಶಾಂತ, ದಿನೇಶ್ , ಆಶಾ, ನವೀನ್ ಮತ್ತು ಕಿರಿಯ ಬ್ಲಾಕ್ ಬೆಲ್ಟ್ ಪದವಿದರರು. ಹಾಗೂ ನಂದಿ ಶಾಲೆಯ ಕರಾಟೆ ತರಬೇತುದಾರರಾದ ಗಾದಿಲಿಂಗಪ್ಪ. ಹಾಗೂ ಪಾಲ ಪೋಷಕರು ಉಪಸ್ಥಿತರಿದ್ದರು



























