ಕರವೇಯಿಂದ ರಾಜ್ಯೋತ್ಸವ ಆಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ನ.01:
ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಘಟಕ, ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್ ಹಾಗೂ ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರಪ್ಪ, ನೇತೃತ್ವದಲ್ಲಿ ಪ್ರತೀ ವರ್ಷದಂತೆ ಈ ವರ್ಷವು ಕೂಡಾ 70ನೇ ಕರ್ನಾಟಕ ರಾಜ್ಯೋತ್ಸವವನ್ನು ಹಂಪಿಯ ತಾಯಿ ಭುವನೇಶ್ವರಿ ದೇವಸ್ಥಾನದಿಂದ ಜ್ಯೋತಿ ತಂದು ಕರವೇ ಕಛೇರಿ ಮುಂಭಾಗದಲ್ಲಿ ಆದ್ದೂರಿಯಾಗಿ ನೆರವೇರಿಸಲಾಯಿತು.
ತದ ನಂತರ ಸಜ್ಜಶ್ರೀ ಸಾಪ್ಟ್‍ವೇರ್ ಕೋಚಿಂಗ್ ಸೆಂಟರ್ ಕರವೇ ಜಿಲ್ಲಾ ಘಟಕದ ನೇತೃತ್ವದಲ್ಲಿ ಎಸ್.ಜಿ.ಟಿ.ಕಾಲೇಜಿನ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಸಾಪ್ಟ್‍ವೇರ್ ಬಗ್ಗೆ ಎರಡು ದಿನಗಳ ಕಾಲ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಆ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಜಿಲ್ಲಾ ಘಟಕವತಿಯಿಂದ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವಿಶ್ವನಾಥಗೌಡ.ಹೆಚ್, ಗಂಗಾಧರಗೌಡ ಕುರುಗೋಡು ಹಾಗೂ ಎಸ್.ಜಿ.ಟಿ. ಕಾಲೇಜ್ ಮುಖ್ಯಸ್ಥಾರಾದ ಎಸ್.ಎನ್.ರುದ್ರಪ್ಪ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್ ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರಪ್ಪ, ಕೆ.ಎಂ.ಶಿವಕುಮಾರ್, ಕೊಳೂರು ಜಿ.ತಿಪ್ಪಾರೆಡ್ಡಿ, ಆನಂದಗೌಡ, ಸೋಮಶೇಖರ್, ಮಂಜುನಾಥ ಬೆಳ್ಳಿಗಾರ್, ತೆಕ್ಕಲಕೋಟೆ ಬಸವರಾಜ,ಹಂಪಿಯಿಂದ ಜ್ಯೋತಿಯನ್ನು ತಂದ ಬೆಳಗಲ್ಲು ಶ್ರೀಧರ್‍ಶೆಟ್ಟಿ, ಶಿವಕುಮಾರ್ ಕುರುಗೋಡು, ಪುರುಷೋತ್ತಮ, ಮಂಜುನಾಥ, ಪವನ್, ಬಳ್ಳಾರಿ ತಾಲ್ಲೂಕು ಅಧ್ಯಕ್ಷರಾದ ದಿವಾಕರ್, ಮೋಕಾ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬಾಣಾಪುರ ಪೊಂಪನಗೌಡ, ಚಾಂದ್‍ಭಾಷ, ಶಂಕರಬಂಡೆ ರಾಜೇಶ್, ಸಾಮಾಜಿಕ ಜಾಲತಾಣ ಸಂಚಾಲಕ ಶ್ರೀಧರಶೆಟ್ಟಿ ಬೆಳಗಲ್ಲು, ವನ್ನನಗೌಡ, ಕೋರಿ ಶ್ರೀಧರ್, ಕೋರಿ ಜಡೆಮೂರ್ತಿ, ಮೋಹನ್, ರಂಗಾರೆಡ್ಡಿ ದಮ್ಮೂರು, ವಣೇನೂರು ಅಂಜಿ, ಶೇಖರ್, ವಿ.ಗಂಗಾಧರ, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್, ಮುಂತಾದ ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.