(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.01: ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಘಟಕದಿಂದ ವೈದೇಹಿ ಆಸ್ಪತ್ರೆ ಸಹಕಾರದಿಂದ ಆರೋಗ್ಯ ತಪಾಸಣೆಯ ಶಿಬಿರ ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ಚಾನಾಳ್ ಶೇಖರ್, ಜಿಲ್ಲಾಧ್ಯಕ್ಷ ಅಂಗಡಿ ಶಂಕ್ರಪ್ಪ, ವೈದೇಹಿ ಆಸ್ಪತ್ರೆಯ ಡಾ. ರಘುವೀರ್, ಡಾಕ್ಟರ್ ರವಿತೇಜ, ಮಲ್ಲಿಕಾರ್ಜುನ ಹಚ್ಚೊಳ್ಳಿ ಜನರ ಆರೋಗ್ಯ ತಪಾಸಣೆ ನಡೆಸಿದರು.
ಗಂಗಾವತಿ ವೀರೇಶ್, ಕೋಳೂರು ಜಿ ತಿಪ್ಪಾರೆಡ್ಡಿ, ಸುನಿಲ್, ನಾಡಗೌಡ್ರು ಚಂದ್ರಮೋಹನ, ಸಣ್ಣ ರಂಗಪ್ಪ, ಸಿರಿಗೇರಿ ಸಿದ್ದರಾಮಪ್ಪ, ಇಮಾಮ್ ಗೋಡೆಕರ್ ಮತ್ತಿತರರು ಇದ್ದರು.

























