
ಸಂಜೆವಾಣಿ ವಾರ್ತೆ
ಮಂಡ್ಯ:ಏ.08:- ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕೊಡ ಬೇಕಿರುವ ಕಬ್ಬಿನ ಬಾಕಿ ಹಣ 150ರೂ.ಗಳನ್ನು ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ರುವ ಜಿಲ್ಲಾ ರೈತಸಂಘದ ಕಾರ್ಯಕರ್ತರು ದಿಡೀರ್ ಹೆದ್ದಾರಿ ತಡೆ ನಡೆಸಿದರು.
ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಜಮಾವಣೆ ಗೊಂಡು ಜಿಲ್ಲಾಧ್ಯಕ್ಷ ಕೆಂಪೂಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ,ಹಲವು ರೈತಪರ ವಿಚಾರ ಮತ್ತು ಸಂಘಟನೆ-ಹೋರಾಟ ಕುರಿತು ಚರ್ಚಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗವಿರುವ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸರ್ಕಾರ ಮತ್ತು ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ,ಮಂಡ್ಯ ಜಿಲ್ಲಾಧಿಕಾರಿಗಳು ಕಾರ್ಖಾನೆ ಗಳ ಆಡಳಿತ ಮಂಡಳಿ ಯೊಂದಿಗೆ ಸಭೆ ನಡೆಸಿ, ರೈತರಿಗೆ ಕೊಡಬೇಕಿರುವ ಕಬ್ಬಿನ ಬಾಕಿ ಹಣ 150ರೂ. ಗಳನ್ನು ತಕ್ಷಣವೇ ನೀಡುವಂತೆ ಹೇಳಿದ್ದರೂ ಇನ್ನೂ ಕೊಡಲಿಲ್ಲ, ಇಂತಹ ರೈತವಿರೋಧಿ ನೀತಿ ಮತ್ತು ತಾರತಮ್ಯವನ್ನು ಖಂಡಿಸಿ,ಬಿಸಿ ಮುಟ್ಟಿಸಲು ರೈತರು ಹೆದ್ದಾರಿ ತಡೆ ಚಳುವಳಿ ಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ, ಸಾಕುಪ್ರಾಣಿಗಳು ಮತ್ತು ಮನುಷ್ಯ ಬಲಿಯಾಗಿ, ಜೀವ ಭಯದಿಂದ ಬದುಕುತ್ತಿದ್ದಾರೆ, ಅರಣ್ಯ ಇಲಾಖೆಯರಿಗೆ ಹೆಳಿದರೆ ನೂರಾರು ಚಿರತೆ ಇವೆ ನಾವೇನು ಮಾಡೋಣ ಎನ್ನುತ್ತಾರೆ, ನಮ್ಮೂರಿಗಳಿಗೆ ತಂದು ಬಿಡಿ ಎಂದು ಹೇಳಿದ್ದೇವೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಹಿಂದಿಭಾಷೆ ಏರಿಕೆಬೇಡ, ಸರ್ಕಾರ ತೆಗೆದುಕೊಂಡಿರುವ ನಿರ್ದಾರ ಸರಿ ಇದೆ, ಹಿಂದಿ ಕಲಿಯೋರು ಕಲಿಬಹುದು, ಆದರೆ ಅದನ್ನ ಕಡ್ಡಾಯ ಗೊಳಿಸೋದು ಇದೆಯಲ್ಲ ನಾವು ಒಪ್ಪುದಿಲ್ಲ ಎಂದು ಕಿಡಿಕಾರಿದರು.
ಏ.18ರಂದು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಕನ್ನಡಪರ, ದಲಿತಸಂಘಟನೆಗಳ ನೆರವಿನೊಂದಿಗೆ ಕಬ್ಬು ಬಾಕಿ ಹಣ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳಾದ ಲಿಂಗಪ್ಪಾಜಿ, ರವಿಕುಮಾರ್, ಲತಾಶಂಕರ್, ಮಮತರಾ, ರಂಜಿತಾ, ರಾಣಿಯಮ್ಮ, ಜಿ.ಎ.ಶಂಕರ್, ಕೆ.ಟಿ. ಗೋವಿಂದೇಗೌಡ, ಜಯರಾಂ, ಮಂಜು,ರಘು, ವಿನೋದ್‍ಬಾಬು, ಶಂಭೂಗೌಡ, ಪಾಂಡು, ವಿಜಿ, ಅಣ್ಣಯ್ಯ, ಸಂತೋಷ್, ಸತೀಶ್, ನಾಗರಾಜು, ಸಿದ್ದೇಗೌಡ ಮತ್ತಿತರರಿದ್ದರು.























