
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಫೆ.25 : ಇತ್ತೀಚೆಗೆ ಎ.ಪ್ರಭಾವತಿ ಎಂಬುವವರು ನಕಲಿ ದಾಖಲೆಗಳ ಮೂಲಕ ಕೌಲ್ ಬಜಾರ್ ಪ್ರದೇಶದ ವಕ್ಫ್ ಮಂಡಳಿಗೆ ಸೇರಿದ 11.5 ಎಕರೆ ಖಬರ್ಸ್ಥಾನದ ಜಮೀನು ಕಬಳಿಸಲು ಮುಂದಾಗಿದ್ದರು. ಆ ಸ್ಥಳಕ್ಕೆ ನಿನ್ನೆ ರಾಜ್ಯಸಭಾ ಸದಸ್ಯ ಡಾ| ಸೈಯದ್ ನಾಸೀರ್ ಹುಸೇನ್ ಅವರು ವಕ್ಫ್ ಮಂಡಳಿಯ ಅಧಿಕಾರಿಗಳು ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿ ಪರಭಾರೆ ನಡೆಸಲು ಪ್ರಯತ್ನ ನಡೆಸಿದ್ದರು. ಇದನ್ನು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎನ್.ಹುಮಾಯೂನ್ ಖಾನ್ ಮೊದಲಾದವರೊಂದಿಗೆ ಮಾಹಿತಿ ಪಡೆದು ಇದು ಮುಸ್ಲಿಂ ಸಮಾಜಕ್ಕೆ ಸೇರುದ ಜಮೀನು ಯಾವುದೇ ಕಾರಣಕ್ಕೆ ಪರರು ಲಪಟಾಯಿಸಲು ಬಿಡಬಾರದು ಎಲ್ಲಾ ದಾಖಲೆಗಳಲ್ಲಿ ಇದು ವಕ್ಪ್ ಜಮೀನು ಎಂದಿದೆ ಎಂದರು.ನಂತರ
ನಂತರ ಅವರು ನಗರದ ಅಂದ್ರಾಳ್ ಬಳಿಯಲ್ಲಿನ, ಖಾಸಗೀ ವ್ಯಕ್ತಿಗಳು ಪರಭಾರೆಗೆ ಪ್ರಯತ್ನಿಸಿರುವ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲಿಸಿ ಮಾಹಿತಿಪಡೆದುಕೊಂಡರು. ಪಾಲಿಕೆಯ ಸದಸ್ಯ ಇಬ್ರಾಹಿಂ ಬಾಬು ಮತ್ತಿತರರು ಉಪಸ್ಥಿತರಿದ್ದರು.



























