
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಫೆ.08:- ರಾಜ್ಯದಲ್ಲಿ ಪರಂಪರೆಯ ಪ್ರಸಿದ್ದಿ ಹೊಂದಿರುವ ಕಪ್ಪಡಿ ಕ್ಷೇತ್ರದ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 15 ರಿಂದ ಮಾರ್ಚಿ 13 ವರೆಗೆ ಒಂದು ತಿಂಗಳು ನಡೆಯುವ ಜಾತ್ರೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಾಲೂಕು ಆಡಳಿತ ಸಕಲ ಸಿದ್ದತೆ ಮಾಡುವಂತೆ ಶಾಸಕ.ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ನಡೆದ ಕಪ್ಪಡಿ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಜಾತ್ರೆ ಬರುವ ಭಕ್ತರಿಗೆ ರಾಚಾಪ್ಪಾಜಿ ಮಠದವರು ತಾಲೂಕು ಆಡಳಿತದವರ ಜೊತೆ ಸ್ಪಂದಿಸಿ ಸಹಕರಿಸ ಬೇಕು ಎಂದರು.
ಹೆಬ್ಬಾಳು ಗ್ರಾಮ ಪಂಚಾಯತಿ ವತಿಯಿಂದ ಶುದ್ದ ಕುಡಿಯುವ ನೀರನ್ನು ಕ್ರಮವಾಗಿ ಒದಗಿಸಿ ಹಾಗೂ ಸೂಕ್ತವಾದ ಸ್ಥಳವನ್ನು ಗುರುತಿಸಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ನಾಲ್ಕೈದು ಕಡೆ ಮಾಡಿಸಿ ಎಂದು ತಾಕೀತು ಮಾಡಿದರು.
ಕೆ.ಆರ್.ನಗರ ಪಟ್ಟಣದಿಂದ ಹೆಬ್ಬಾಳು ಗ್ರಾಮದ ಮಾರ್ಗವಾಗಿ ಕಪ್ಪಡಿ ಕ್ಷೇತ್ರದವರೆವಿಗೂ ರಸ್ತೆಯ ಗುಂಡಿಗಳನ್ಬು ಮುಚ್ಚಿಸಿ, ಅಲ್ಲಲ್ಲಿ ಇರುವ ರಸ್ತೆ ಹಂಪುಗಳಿಗೆ ರೇಡಿಯಂ ಬಣ್ಣ ಹಾಕಿಸಿ ಅಪಘಾತ ತಪ್ಪಿಸಿ ಎಂದು ಲೋಕೋಪಯೋಗಿ ಇಲಾಖೆ ಎಇಇ ಸುಮಿತ ಅವರಿಗೆ ಸೂಚಿಸಿದರು.
ಕಪ್ಪಡಿ ಜಾತ್ರೆ ಆರಂಬದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ, ಮೈಸೂರು, ಹುಣಸೂರು ಕಡೆಗಳಿಂದ ಬಸ್ ಪಢದು ಕೊಳ್ಳಲಾಗಿದ್ದು ಅಂದಾಜು ಐವತ್ತಕ್ಕೂ ಹೆಚ್ಚು ಬಸ್ ಗಳು ಓಡಾಟ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಶಾಸಕರು ವಿದ್ಯುತ್ ದೀಪಾಂಲಕಾರ ಜೊತೆಗೆ ರಸ್ತೆಯ ಎರಡು ಬದಿಯಲ್ಲಿ ಸೋಲಾರ್ ಬೀದಿ ದೀಪ ಅಳವಡಿಸಲಾಗಿದೆ, ಯಾವುದೇ ಕಾರಣಕ್ಕೂ ಮಧ್ಯ ಮಾರಾಟ ಮಾಡದಂತೆ ಎಚ್ಚರಿಕೆಯಿಂದ ನಿಗಾ ವಹಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಒಂದು ತಿಂಗಳು ನಡೆಯುವ ಕಪ್ಪಡಿ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲ ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಪೆÇಲೀಸ್ ಇಲಾಖೆಗೆ ನಿರ್ಧೇಶನ ನೀಡಲಾಗಿದ್ಸು ಈ ಬಾರಿ ಬಿಗಿ ಭದ್ರತಾ ವ್ಯವಸ್ಥೆ ಇರುತ್ತದೆ ಜಾತ್ರೆಗೆ ಬರುವ ಭಕ್ತರು ಪೆÇಲೀಸರ ಜೊತೆ ಸಹಕರಿಸ ಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ.ಅಧ್ಯಕ್ಷ ಕಾಂತರಾಜ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕರಾದ ಕೆ.ಎನ್.ಪ್ರಸನ್ನ, ಸಯ್ಯದ್ದ್ ಜಾಬೀರ್, ಮಂಟೇಸ್ವಾಮಿ ಪರಂಪರೆ ಹೋರಾಟಗಾರ ಉಗ್ರ ನರಸಿಂಹೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಗ್ರಾ.ಪಂ.ಉಪಾಧ್ಯಕ್ಷ ನಾಗೇಶ್, ಸದಸ್ಯರಾದ ವೆಂಕಟರಾಮು, ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ, ತಾ.ಪಂ.ಇಓ ವಿ.ಪಿ.ಕುಲದೀಪ್, ಪೆÇಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಪಿಡಿಓ ಸರಿತಾ, ತಾ.ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಹೆಬ್ಬಾಳು ನಾಗೇಂದ್ರ, ವೇಣು, ಪರಶುರಾಮ್, ಕಪ್ಪಡಿ ಕ್ಷೇತ್ರದ ಭರತ್, ತಾ.ಪಂ.ಮಾಜಿ ಸದಸ್ಯ ಎಂ.ಎಸ್.ಸ್ವಾಮಿ, ದಲಿತ ಮುಖಂಡ ರಾಮಯ್ಯ ಸೇರಿದಂತೆ ವಿವಿದ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.




























