ಕನ್ನಡ ಭಾμÉ , ಸಂಸ್ಕøತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಾಗಿದೆ: ಬಿ.ಕೆ. ರವಿಕುಮಾರ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.01-
ಕನ್ನಡ ಭಾμÉ ಮತ್ತು ಸಂಸ್ಕøತಿ ಅತ್ಯಂತ ಶ್ರೀಮಂತವಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ತಿಳಿಸಿದ್ದಾರೆ.


ಅವರು ತಾಲ್ಲೂಕಿನ ಗಡಿ ಗ್ರಾಮ ಬಂದಿ ಗೌಡನಹಳ್ಳಿಯಲ್ಲಿ ಗಡಿನಾಡು ಕನ್ನಡ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ಕನ್ನಡ ಭಾμÉಗೆ ನೂರಾರು ವರ್ಷಗಳ ಇತಿಹಾಸವಿದೆ ನಮ್ಮ ಭಾμÉ ಸಂಸ್ಕೃತಿಗೆ ಹೋರಾಟದ ಹಿನ್ನೆಲೆ ಇದೆ ಅದನ್ನು ನಮ್ಮ ಯುವ ಪೀಳಿಗೆ ಉಳಿಸಿ ಬೆಳೆಸಲು ಶ್ರಮಿಸಬೇಕು ಸಂಘಟನೆ ಹೋರಾಟ ಸಂಘಗಳ ಕಾರ್ಯ ಸೂಚಿಯಾಗಬೇಕು ಅದು ಕನ್ನಡದ ಉಳಿವಿಗೆ ಬೆಳವಣಿಗೆಗೆ ಬಳಕೆಯಾಗ ಬೇಕೆಂದರು.
ಮುಖ್ಯಶಿಕ್ಷಕ ರಂಗನಾಥ್ ಮಾತನಾಡಿ ಗಡಿ ಭಾಗದಲ್ಲಿ ಕನ್ನಡದ ಅರಿವು ಮೂಡಿಸಲು ಸಂಘಟನೆಗಳು ಶ್ರಮಿಸಬೇಕು ಎಂದರ.


ಗಡಿನಾಡು ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ನಿಜಗುಣ ಆರಾಧ್ಯ ಮಾತನಾಡಿ ನಮ್ಮ ಸಂಘದಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಚರ್ಚಾ ಸ್ಪರ್ಧೆ ಇತರೆ ಕಾರ್ಯ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕನ್ನಡ ಭಾμÉಯ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲಾಗುವುದು ಎಂದರು.
ಮುಖಂಡರಾದ ನಾಗೇಂದ್ರ ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕರಾದ ಬಸವಣ್ಣ, ಪ್ರಸನ್ನ, ಆದಿತ್ಯ, ಮಲ್ಲೇಶ, ಲಿಂಗರಾಜು, ಬಸವರಾಜು, ಗಣೇಶ ಸೇರಿದಂತೆ ಶಾಲಾ ಮಕ್ಕಳು ಊರಿನ ಮುಖಂಡರು ಹಾಜರಿದ್ದರು