
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಜ.31:– ಕರ್ನಾಟಕ ರಾಜ್ಯ ಭಾರತ ಮಾತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ತಾಲೂಕು ಘಟಕಕ್ಕೆ ನಿಯೋಜಿತ ಅಧ್ಯಕ್ಷರಾಗಿ ಬಿ.ಮಹದೇವಸ್ವಾಮಿ ಅವರನ್ನು ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಂಘದ ಕಾರ್ಯಚಟುವಟಿಕೆಗಳನ್ನು ಈ ಹಿಂದಿನ ಅಧ್ಯಕ್ಷ ರಾಜೇಶ್ ನಿಸ್ಕ್ರಿಯಗೊಳಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿ, ತಾಲೂಕು ಘಟಕವನ್ನು ವಿಸರ್ಜಿಸಲು ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ನಡೆದಂತಹ ಸಭೆಯಲ್ಲಿ ನೂತನ ತಾಲೂಕು ಅಧ್ಯಕ್ಷರನ್ನಾಗಿ ಬಿ.ಮಹದೇವಸ್ವಾಮಿ ಅವರನ್ನು ನಿಯೋಜಿಸಿ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಘಟಕವನ್ನು ರಾಜ್ಯಾಧ್ಯಕ್ಷ ಜಿ.ಸಿದ್ದರಾಜು ಮಾತನಾಡಿ, ತಾಲೂಕಿನಲ್ಲಿ ಕ್ರಿಯಾಶೀಲ ಸಂಘಟನೆ ಆಗಿದ್ದ ನಮ್ಮ ಸಂಘದ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿ, ಕಾರ್ಮಿಕರ ಹಿತವನ್ನು ಕಾಪಾಡುವಲ್ಲಿ ವಿಫಲರಾಗಿದ್ದರಿಂದ ಅವರನ್ನ ಸಂಘದಿಂದ ತೆಗೆಯುವ ನಿರ್ಣಯ ಮಾಡಿದ್ದೇವೆ. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನಿಯೋಜಿತ ಅಧ್ಯಕ್ಷ ಬಿ.ಮಹದೇವಸ್ವಾಮಿ ಮಾತನಾಡಿ, ಹಿಂದಿನ ಅಧ್ಯಕ್ಷ ರಾಜೇಶ್ ಅವರು ರಾಜೀನಾಮೆ ನೀಡಲು ಒಪ್ಪಿದ್ದು, ರಾಜೀನಾಮೆ ಪತ್ರ ತಲುಪಿದ ಕೂಡಲೇ ಸಂಘದ ಕಾರ್ಯ ಚಟುವಟಿಕೆಯನ್ನು ವಿದ್ಯುಕ್ತವಾಗಿ ಆರಂಭಿಸುತ್ತೇನೆ. ತಾಲೂಕು ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರು ಸಂಕಷ್ಟದಲ್ಲಿದ್ದು, ಅವರಿಗೆ ಸರಕಾರ ಹಾಗೂ ಕಾರ್ಮಿಕ ಇಲಾಖೆಯಿಂದ ಮೂಲ ಸೌಲಭ್ಯ, ಹಾಗೂ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಇನ್ನುಳಿದಂತೆ ಸಂಘಕ್ಕೆ ಸತೀಶ್ (ಉಪಾಧ್ಯಕ್ಷ), ಸುಂದರ್ (ಪ್ರಧಾನ ಕಾರ್ಯದರ್ಶಿ), ನಾಗರಾಜು(ಖಜಾಂಚಿ), ಮತ್ತೋರ್ವ ನಾಗರಾಜು (ಕಾರ್ಯದರ್ಶಿ), ಮಲ್ಲು(ಹೋಬಳಿ ಸಂಚಾಲಕ), ಮಾಣ್ಯಿಂ(ಸಹ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕುಮಾರ್ ಮೇಸ್ತ್ರಿ, ರಾಜೇಶ್, ಪುಟ್ಟರಾಜು, ಗೋವಿಂದರಾಜು, ಜೆ.ಕುಮಾರ್, ರಾಮು, ನಂಜುಂಡ, ರವಿ, ಶಾಂತರಾಜು, ಮಂಜು, ರಾಚಯ್ಯ, ಸಿದ್ದರಾಜು, ರಾಜಣ್ಣ, ಕುಮಾರ್, ವಡ್ಡರಪಾಳ್ಯ ತಾಲೂಕು ಅಧ್ಯಕ್ಷ ನಾಗೇಂದ್ರಸ್ವಾಮಿ, ಉಪಾಧ್ಯಕ್ಷ ವಿಶ್ವನಾಥ್ ಹಾಗೂ ಇತರರು ಇದ್ದರು.
























