Home ಜಿಲ್ಲೆ ಮೈಸೂರು ಔದಾರ್ಯ ಮೆರೆದ ಶಾಸಕ ಮಂಜುನಾಥ್ ಜನ ಮೆಚ್ಚುಗೆ

ಔದಾರ್ಯ ಮೆರೆದ ಶಾಸಕ ಮಂಜುನಾಥ್ ಜನ ಮೆಚ್ಚುಗೆ

ಸಂಜೆವಾಣಿ ವಾರ್ತೆ
ಹನೂರು.ಆ.21:-
ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ನೀಡಿದ 5ಲಕ್ಷ. ಸಚಿವ ಪುಟ್ಟರಂಗಶೆಟ್ಟಿ ತಲಾ 2 ಲಕ್ಷ ಇದರೊಂದಿಗೆ ಶಾಸಕ ಮಂಜುನಾಥ್ ಅವರು ವೈಯಕ್ತಿಕವಾಗಿ ತಲಾ 8 ಲಕ್ಷ ಮೊತ್ತವನ್ನು ಘೋಷಣೆ ಮಾಡುವುದರ ಮೂಲಕ ಮೃತರ ಕುಟುಂಬಗಳಿಗೆ ತಲಾ 15 ಲಕ್ಷಗಳನ್ನು ನೀಡಿ ಇದು ತಾತ್ಕಾಲಿಕ ಪರಿಹಾರ ಎಂದು ಘೋಷಿಸಿರುವುದು ವಿಶೇಷ. ಬಹುಶಃ ಕರ್ನಾಟಕದ ಚಾಮರಾಜನಗರ ಜಿಲ್ಲೆ ಸದಾ ಬರಪೀಡಿತ ಜಿಲ್ಲೆ. ಇಂತಹ ಜಿಲ್ಲೆಯ ಹನೂರು ಕ್ಷೇತ್ರದ ಶಾಸಕರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ, ಈ ಭಾಗಗಳಿಗೆ ನೀರುಣಿಸುವ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಇದರಿಂದ ಶಾಸಕರು ಕರ್ನಾಟಕದ ಮಾದರಿ ಶಾಸಕರಾಗಿದ್ದಾರೆಂದು ಇಲ್ಲಿನ ಕ್ಷೇತ್ರದವರು ಕೊಂಡಾಡುತ್ತಿದ್ದಾರೆ.


ತಮಸದಾನ ರಾಜಸದಾನ ಮತ್ತು ಸ್ವಾತಿಕ ದಾನಗಳೆಂದು ವಿಂಗಡಿಸಬಹುದಾಗಿದೆ. ತಾಮಸದಾನ ಎಂದರೆ ತಿರಸ್ಕಾರ ಮತ್ತು ಅಹಂಕಾರ ಮನೋಭಾವನೆಗಳನ್ನಿಟ್ಟುಕೊಂಡು ಮಾಡುವ ದಾನವೇ ತಾಮಸದಾನ. ಇದು ಶ್ರೇಷ್ಠ ಎನಿಸಿಕೊಳ್ಳುವುದಿಲ್ಲ. ರಾಜಸದಾನ ಎಂದರೆ ಮುಂದೆ ನಮಗೇನಾದರೂ ಅನುಕೂಲಗಳಾಗಬಹುದೆಂದು ಭಾವಿಸಿ, ಸ್ವಾರ್ಥ ಮನಸ್ಸಿನಿಂದ ಪ್ರತ್ಯುಪಕಾರವನ್ನು ಬಯಸಿ ಮಾಡುವ ದಾನವೇ ರಾಜಸದಾನ. ಇದನ್ನು ಶ್ರೇಷ್ಠತೆಗೆ ಸೇರುವ ದಾನವಲ್ಲ.


ಸ್ವಾತಿಕದಾನ ಎಂದರೆ ಏನನ್ನು ಬಯಸದೆ, ನಿಸ್ವಾರ್ಥ ಮನೋಭಾವನೆಯಿಂದ ಏನನ್ನೂ ಬಯಸದೆ ಪರಿಸ್ಥಿತಿ, ಸಂದರ್ಭಗಳು, ಮತ್ತು ಸಮಯ ಈ ಘಟನೆಗಳಿಂದ ಉದ್ಭವವಾಗುವ ಪಾತ್ರಗಳನ್ನರಿತು ಮಾಡುವ ಶ್ರೇಷ್ಠ ದಾನವೇ ಸ್ವಾತಿಕದಾನ. ಹಾಗೂ ಈ ದಾನದಲ್ಲಿ ಶ್ರದ್ಧೆಯಿದೆ. ಅಸಡ್ಡೆಯಿರುವುದಿಲ್ಲ.
ಸತ್ಪಾತ್ರರಿಗೆ ದಾನ ಮಾಡುವುದರ ಮೂಲಕ ಸಕಾಲದಲ್ಲಿ ಸಮಪ್ರಮಾಣದಲ್ಲಿ ಸಂತೋಷದಿಂದ ದಾನಮಾಡಿ, ದಾನಮಾಡಿದ ಕೂಡಲೇ ಇದು ನನ್ನದಲ್ಲ ಎಂಬ ಭಾವನೆಯಿಂದ ದಾನ ಮಾಡಬೇಕೆಂದು ಧರ್ಮ ಹೇಳುವ ನೀತಿಯನ್ನು ಅನುಸರಿಸಿ ದಾನ ಮಾಡಿರುತ್ತಾರೆ ಶಾಸಕ ಮಂಜುನಾಥ್ ಅವರು.


ಒಟ್ಟಿನಲ್ಲಿ ದಾನವೆಂಬುದು ನಮ್ಮ ಕೈಗಳಿಗೆ ಭೂಷಣ ಎಂದು ಭಾವಿಸುತ್ತಾ, ದಾನ ಮಾಡಲು ಹಣದ ಶ್ರೀಮಂತಿಕೆಯೊಂದೇ ಸಾಲದು. ಹೃದಯ ಶ್ರೀಮಂತಿಕೆಯೂ ಬೇಕು.
ಹನೂರು ಕ್ಷೇತ್ರದ ಜನಪ್ರಿಯ ಹಾಗೂ ಜನಸ್ನೇಹಿ ಶಾಸಕರಾದ ಶ್ರೀ ಎಂ.ಆರ್.ಮಂಜುನಾಥ್ ರವರು ಮೃತರ ಕುಟುಂಬದೊಂದಿಗೆ, ಅರಣ್ಯ ಇಲಾಖೆಯೊಂದಿಗೆ, ಗೃಹ ಇಲಾಖೆಯೊಂದಿಗೆ ಅರಣ್ಯ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿಯೊಂದಿಗೆ, ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕ ಸಾಧಿಸಿ ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚಿಸಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳುತ್ತಾ ಅಹರ್ನಿಶಿ ದುಡಿದಿದ್ದಾರೆ. ಎಲ್ಲರೂ ಸಮಾಧಾನವಾಗುವ ಹಾಗೂ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ನಿಜಕ್ಕೂ ಇದು ಇವರ ಔದಾರ್ಯಕ್ಕೆ ಮೆಚ್ಚಲೇಬೇಕಾಗಿದೆ.
ಅಂಜುಮ್ ಜೆಎಸ್‍ಎಸ್
ಮದರ್ ಮಂಜೀದ ವಿದ್ಯಾಸಂಸ್ಥೆ ಬಂಡಳ್ಳಿ.