
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.24:ನಗರದಲ್ಲಿ ಮುಕ್ತವಾಗಿ ನಡೆಯುತ್ತಿರುವ ಮಟಕಾ (ಓಸಿ) ದಂಧೆ ಬಗ್ಗೆ ಎಸ್ಪಿ ಡಾ.ಶೋಭಾರಾಣಿ ಅವರ ಎದುರಿನಲ್ಲಿಯೇ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು ಕಂಡು ಬಂದಿದೆ.
ನಿನ್ನೆ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಮಸ್ಯೆಗಳ ಪರಾಮರ್ಶೆ ಸಭೆಯಲ್ಲಿ ಭಾಗಿಯಾಗಿದ್ದ ಎಸ್ಪಿ ಅವರ ಮುಂದೆಯೇ ಮಟ್ಕಾ ದಂಧೆ ನಡೆಯುವುದನ್ನು ನೋಡಿಯೂ ಪೊಲೀಸರು ಸುಮ್ಮನಿದ್ದಾರೆ ಅದರಲ್ಲೂ ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರ ಕಾರ್ಯವೈಖರಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಯ್ತು.
ಸಾರ್ವಜನಿಕರ ಪ್ರಶ್ನೆಗೆ ಒಂದಿಷ್ಟು ಸಿಡುಕಿನಿಂದಲೇ ಎಸ್ಪಿ ಶೋಭಾರಾಣಿ ಅವರು ನಾನಿಲ್ಲಿ ಬಂದಿರುವುದು ಸಮಸ್ಯೆ ಆಲಿಸಲು. ಸಮಸ್ಯೆ ಹೇಳಿ ಅದು ಬಿಟ್ಟು ನನ್ನೆದುರಿಗೆ ನನ್ನ ಇಲಾಖೆ ಸಿಬ್ಬಂದಿಯನ್ನು ಪ್ರಶ್ನಿಸಬೇಡಿ ಎಂದು ತಮ್ಮ ಸಿಬ್ಬಂದಿ ಪರ ನಿಂತಿದ್ದಾರೆ.
























