ಒಳ ಮೀಸಲಾತಿ ಹೆಚ್ಚಳಕ್ಕೆ ನಗರದಲ್ಲಿಭೋವಿ, ಲಮಾಣಿ, ಕೊರಮ ಕೊರಚರಿಂದ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,16
– ಭೋವಿ, ಲಮಾಣಿ  ಕೊರಮ ಮತ್ತು ಕೊರಚ ಈ ನಾಲ್ಕು ಜಾತಿಗೆ  ಒಳ‌ಮೀಸಲಾತಿ‌ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ‌ ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಲಾಯ್ತು. ಸಿಎಂ ಹಾಗು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯ್ತು ಜಿಲ್ಲಾಡಳಿತದ ಮುಖಾಂತರ. ಬೋವಿ, ಲಂಬಾಣಿ, ಕೊರಮ ಮತ್ತು ಕೊರಚ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ನಾರಾಯಣ ರಾವ್ ಪಾರ್ಕ್ ನಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ನಡೆಸುತ್ತ ಬಂದ ಜನತೆ.‌ಈ ಮೊದಲು ಸದಾಶಿವ ಆಯೋಗದ ವರದಿಯಲ್ಲಿ  ಶೇ. 4.5 ಮೀಸಲಾತಿ ಇತ್ತು.  ಈಗ ಶೇ.0.5 ಹೆಚ್ಚಿಸಿ ಅಲೆಮಾರಗಳ ,59 ಜಾತಿ ಸೇರಿಸಿರುವುದು ಅನ್ಯಾಯವಾಗಿದೆ. ಅದಕ್ಕಾಗಿ ನಮಗೆ ಶೇ 6 ರಿಂದ 7 ಮೀಸಲಾತಿ ನೀಡಬೇಕು.
ನಮ್ಮ 63 ಜಾತಗಳಿಗೆ ಶೇ 5 ರಷ್ಟು ಮಾತ್ರ  ಮೀಸಲು ಮಾಡಿದೆ ಸಿದ್ದರಾಮಯ್ಯ ಸರ್ಕಾರ. ಇದು ನಮಗೆ ಅನ್ಯಾಯವಾಗಿದೆ. ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಶೇ 4.5 ಮೀಸಲಾತಿ ನಿಗಧಿ ಮಾಡಿತ್ತು. ಅದನ್ನು ವಿರೋಧಿಸಿತ್ತು.
ಮಾಧವ ಸಮಿತಿಯ ವರದಿಯನ್ನು ವಿರೋಧಿಸಿತ್ತು. ನಾಗಮೋಹನ್ ದಾಸ್ ಅವರ ಆಯೋಗ ದತ್ತಾಂಶ ಸಂಗ್ರಹಣೆ ಸರಿಯಾಗಿಲ್ಲ. ಅದಕ್ಕಾಗಿ
ನಮಗೆ ಶೇ 6 ರಿಂದ 7 ಮೀಸಲಾತಿ ಕೊಡಿ. ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕೊಡಿ ಎಂದು ಆಗ್ರಹಿಸಲಾಯ್ತು
ಲಂಬಾಣಿ ಸಮುದಾಯದ ಮುಖಂಡ ಗೋಪಿ ನಾಯ್ಕ, ರಾಮು ನಾಯಕ್, ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷ ರಾಮಾಂಜನಿ, ಎಂ ಟಿ ಮಲ್ಲೇಶಪ್ಪ,ಕೊರಚ ಮತ್ತು ಕೊರಮ ಸಮಾಜದ ಮುಖಂಡರಾದ ಡಾ. ಹನುಮಂತಪ್ಪ, ರಮಣಪ್ಪ ಭಜಂತ್ರಿ, ಶಂಕರ ಬಂಡೆ ವೆಂಕಟೇಶ್,ಹೆಚ್ ಕೆ ಹೆಚ್ ಹನುಮಂತಪ್ಪ, ರಂಗಸ್ವಾಮಿ, ಶ್ರೀನಿವಾಸ, ಶ್ರೀರಾಮುಲು, ಕೆ ವಿ ಶಂಕರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.