ಒಳ ಮೀಸಲಾತಿ ವರದಿ ವಿರೋಧಿಸಿ: ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು ಆ 13 :-
ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ರವರ ಒಳ ಮೀಸಲಾತಿ ವರದಿ ವಿರೋಧಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕಾಮಗೆರೆ ಗ್ರಾಮಸ್ಥರು ಭಾಗಿಯಾಗಲು ಎರಡು ಬಸ್ ಗಳಲ್ಲಿ ಇಂದು ಬುಧವಾರ ಬೆಳಿಗ್ಗೆ ತೆರಳಿದರು.


ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಭವನ ಅಭಿವೃದ್ಧಿ ಸಮಿತಿ ಹಾಗೂ ಯಜಮಾನರು ಗ್ರಾಮಸ್ಥರು ಹಾಗೂ ಯುವಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದರು.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಇಂದು ಹಮ್ಮಿಕೊಂಡಿರುವ ಬೃಹತ್ ಮೆರವಣಿಗೆ ಪ್ರತಿಭಟನೆಯಲ್ಲಿ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ರವರ ಒಳ ಮೀಸಲಾತಿ ವರದಿ ವಿರೋಧಿಸಿ ಪ್ರತಿಭಟನೆಯಲ್ಲಿ ಕಾಮಗೆರೆ ಗ್ರಾಮಸ್ಥರು ಭಾಗವಹಿಸಲು ತೆರಳಿದರು.


ಗ್ರಾಮ ಪಂ. ಅಧ್ಯಕ್ಷ ಕೆ.ಕುಮಾರ್, ಯಜಮಾನರು ಮಾದೇಶ್, ರಾಜಪ್ಪ, ನಾಗರಾಜು, ಅಂಬೇಡ್ಕರ್ ಭವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಬಾಬಣ್ಣ, ಚಿಕ್ಕಸ್ವಾಮಿ, ಆನಂದ್, ಕುಳ್ಳ, ಚಿನ್ನಸ್ವಾಮಿ, ಪತ್ರಕರ್ತ ಪ್ರಕಾಶ್, ಚಿನ್ನಪ್ಪ, ಶ್ರೀನಿವಾಸ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದ್ದರು.