ಒಳ್ಳೆಯದನ್ನು ಬೆಳೆಸೋಣ ಜ್ಞಾನವನ್ನು ಹಂಚೋಣ ವೇಮುಲಪಲ್ಲಿ ಗಾಂಧಿಯವರ ಕೃತಿ ಬಿಡುಗಡೆ

Oplus_16908288

ಬಳ್ಳಾರಿ, ಡಿ.12:  ವೇಮುಲಪಲ್ಲಿ ಗಾಂಧಿ ಅವರು ಈ ಶಾಲೆ ಕಾಲೇಜು ಮೂಲಕ ಒಳ್ಳೆಯದನ್ನೆ ಹಂಚುತ್ತಿದ್ದಾರೆ ಎಂದು ನಿವೃತ್ತ ಸಹ ಪ್ರಾಧ್ಯಾಪಕ ಡಾ.ಬಿ.ಆರ್.ಮಂಜುನಾಥ  ಅಭಿಪ್ರಾಯಪಟ್ಟರು.

ಅವರು ನಿನ್ನೆ ಸಂಜೆ ನಗರದ ನಂದ ವಸತಿ ಶಾಲೆಯಲ್ಲಿ ಶಾಲೆಯ ಅಧ್ಯಕ್ಷ ವೇಮುಲಪಲ್ಲಿ ಗಾಂಧಿ ಅವರು  ತೆಲುಗು ಭಾಷೆಯಲ್ಲಿ ಸಂಪಾದಿಸಿದ್ದ   “ಮಂಚಿದಿ ಪೆಂಚುದಾಂ ವಿಜ್ಞಾನಂ ಪೆಂಚುದಾಮು” ಎಂಬ ಕೃತಿಯನ್ನು ಎಸ್.ಅಪ್ಪಯ್ಯ ಭಟ್ಟರು ಕನ್ನಡಕ್ಕೆ ಅನುವಾದಿಸಿರುವ “ಒಳ್ಳೆಯದನ್ನು ಬೆಳೆಸೋಣ ಜ್ಞಾನವನ್ನು ಹಂಚೋಣ” ಎಂಬ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಒಳ್ಳೆಯದು ಎಂದರೆ ಯಾವುದು. ಪ್ರಕೃತಿ ಯಾವಾಗಲೂ ಒಳ್ಳೆಯದನ್ನೇ ನೀಡುತ್ತದೆ. ಅದನ್ನು ನಾವು ಹೇಗೆ ಸ್ವೀಕಾರ ಮಾಡುತ್ತೇವೆ ಹಾಗೆ ಒಳ್ಳೆಯದು ಮತ್ತು ಜ್ಞಾನ ಎಲ್ಲರಿಗೂ ದೊರೆಯಲಿದೆ. ಹಾಗಾಗಿ ನಾವು ಸಹ ಒಳ್ಳೆಯದನ್ನೇ ಮಾಡುತ್ತ ಅದನ್ನು ಹಂಚುವ ಕೆಲಸ ಆಗಬೇಕೆಂದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಲಗಶೆಟ್ಟಿ,

ವಿ.ಗಾಂಧಿ ಅವರ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಸಾಧನೆ ಮುಖ್ಯ ಅದರ ಕನಸು ಮಕ್ಕಳದ್ದಾಗಬೇಕು. ಅದಕ್ಜೆ ಎಲ್ಲರೂ ಒಳ್ಳೆಯದನ್ನೇ ಮಾಡಿ, ಸಂಕಲ್ಪಿಸಿದರೆ ಜ್ಞಾನವೂ ಲಭಿಸಲಿದೆಂದರು. 

ಕೃತಿ ಕುರಿತು ಮಸತನಾಡಿದ ನಿವೃತ್ತ ಉಪನ್ಯಾಸಕ ಎನ್.ಬಸವರಾಜ್, ಪತ್ರಿಕೆಗಳಲ್ಲಿ ವಿವಿಧ ವಸ್ತುವಿಷಯಗಳನ್ನು ಓಳಗೊಂಡು  ಪ್ರಕಟಗೊಂಡ ಉತ್ತಮ ಅಂಕಣಗಳ ಬರಹಗಳನ್ನು ಕ್ರೂಡೀಕರಿಸಿ ಈ ಕೃತಿ ನೀಡಿರುವುದು ಶ್ಲಾಘನೀಯಕಾರ್ಯವೆಂದರು.

ಎಸ್.ಅಪ್ಪಯ್ಯ ಭಟ್ಟರು ಮಾತನಾಡಿ ಕೃತಿಯಲ್ಲಿ 13, 14 ನೇ ಲೇಖನಗಳನ್ನು ಓದಿ ಎಂದು ಒತ್ತಿ ಹೇಳಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ವೇಮುಲಪಲ್ಲಿ ಗಾಂಧಿ ಅವರು ಮಾತನಾಡಿ, ಪ್ರತಿದಿನ ಪೇಪರ್ ನಲ್ಲಿ ಬರುವ ಉತ್ತಮವಾದುದನ್ನು ಸಂಗ್ರಹಿಸಿ ಈ ಕೃತಿ ತರಲು ಸಂಕಲ್ಪ ಮಾಡಿದೆನೆಂದರು.  ಇನ್ನೂ ಎರೆಡು ಸಂಪುಟದಲ್ಲಿ ಈ ಕೃತಿ ಬರಲಿದೆ. ಇವನ್ನು ಓದಿದರೆ ಮಾನವೀಯತೆ ಎಲ್ಲರೂ ಮೂಡಲಿದೆಂಬ ಆಶಾಭಾವನೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ, ನಂದ ಶಾಲೆಯ ಉಪಾಧ್ಯಕ್ಷ ವಿ.ಮುರುಳಿಕೃಷ್ಣ, ಕಾರ್ಯದರ್ಶಿ ವಿ.ರಮಣಕುಮಾರ್ ಮೊದಲಾದವರು ಇದ್ದರು.