
ಸಂಜೆವಾಣಿ ನ್ಯೂಸ್
ಮೈಸೂರು.ಜ.25:- ಜನವರಿ 2026 ರಂದು ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಎSSಂಊಇಖ), ಅಡಿಯಲ್ಲಿ ಕಾರ್ಯನಿರ್ವಹಿಸುವ ಜೆಎಸ್‍ಎಸ್ ಫಾರ್ಮಸಿ ಕಾಲೇಜ್ (ಎSSಅPಒ) ಮೈಸೂರಿನಲ್ಲಿ ಆಯೋಜಿಸಲಾಯಿತು. ಈ ಸಿಂಪೆÇೀಸಿಯಂ ಭಾರತ ಸರ್ಕಾರದ ಂಟ ಇಂಪ್ಯಾಕ್ಟ್ ಸಮಿಟ್ 2026ರ ಅಧಿಕೃತ ಪ್ರೀ-ಸಮ್ಮಿಟ್ ಕಾರ್ಯಕ್ರಮವಾಗಿದ್ದು,
ಈ ಸಂದರ್ಭದಲ್ಲಿ ಜೆಎಸ್‍ಎಸ್ ಫಾರ್ಮಸಿ ಕಾಲೇಜ್ ಮೈಸೂರು, ಭಾರತದಲ್ಲಿ ಮೊದಲ ಫಾರ್ಮಸಿ ಕಾಲೇಜಾಗಿ ಸಮಿಟ್‍ನೊಂದಿಗೆ ಅಧಿಕೃತ ಸಂಯೋಜನೆ ಪಡೆಯುವ ಗೌರವ ಪಡೆದುಕೊಂಡಿತು. ಇದರಿಂದ ಫಾರ್ಮಸಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನೈತಿಕ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (ಂI) ಅನುಷ್ಠಾನದಲ್ಲಿ ಸಂಸ್ಥೆಯ ಶಕ್ತಿಯು ಮತ್ತಷ್ಟು ಬೆಳಕಿಗೆ ಬಂದಿದೆ. ಸಿಂಪೆÇೀಸಿಯಂನ ಥೀಮ್ “ಒನ್ ವಲ್ರ್ಡ್, ಒನ್ ಹೆಲ್ತ್’ ಆಗಿದ್ದು, ಔಷಧ ಕ್ಷೇತ್ರದಲ್ಲಿ ಜವಾಬ್ದಾರಿಯುತ ಂಟ ಬಳಕೆಯ ಮೂಲಕ ರೋಗಿ ಆರೈಕೆಯನ್ನು ಸುಧಾರಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಯಿತು.
ಜೆಎಸ್‍ಎಸ್ ಎ ಹೆಚ್ ಇ ಆರ್ ರಿಜಿಸ್ಟ್ರಾರ್ ಡಾ. ಬಿ. ಮಂಜುನಾಥ ಅವರು ಆರೋಗ್ಯ ವಿಜ್ಞಾನಗಳಲ್ಲಿ ನೈತಿಕ ನವೀನತೆಗೆ ವಿಶ್ವವಿದ್ಯಾಲಯದ ಬದ್ಧತೆಯನ್ನು ವಿವರಿಸಿದರು. ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರಾಂ ಡಾ. ಟಿ. ಎಂ. ಪ್ರಮೋದ್ ಕುಮಾರ್ ಅವರು ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ, ಔಷಧ ಜೀವನಚಕ್ರದಾದ್ಯಂತ ರೋಗಿ ಸುರಕ್ಷತೆ, ನಂಬಿಕೆ ಮತ್ತು ಪರಿಸರ ಸ್ನೇಹಿ ಪ್ರಗತಿಗೆ ಅನುಷ್ಠಾನಸಿದ್ದ ಂಟ ಅಗತ್ಯವಿದೆ ಎಂದು ವಿವರಿಸಿದರು.
ಕಾರ್ಯಕ್ರಮವು ಅಕಾಡೆಮಿಯಾ, ಉದ್ಯಮ, ನಿಯಂತ್ರಣ ಸಂಸ್ಥೆಗಳು, ಸ್ಟಾರ್ಟ್-ಅಪ್ಸ್ ಮತ್ತು ಆರೋಗ್ಯ ವ್ಯವಸ್ಥೆಗಳ ತಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಿತು. ಔಷಧ ಅನ್ವೇಷಣೆ, ವೈಯಕ್ತಿಕರಿಸಿದ ಔಷಧ, ಫಾರ್ಮಕೋವಿಜಿಲನ್ಸ್, ಡೇಟಾ ಅನಾಲಿಟಿಕ್ಸ್ ಮತ್ತು ಸುಸ್ಥಿರ ಪ್ರಕ್ರಿಯೆಗಳವರೆಗೆ ಪ್ರಾಯೋಗಿಕ ಹಾಗೂ ಜವಾಬ್ದಾರಿಯುತ ಂಟ ಅನ್ವಯಗಳ ಕುರಿತು ತಜ್ಞ ಉಪನ್ಯಾಸಗಳು, ಪ್ಯಾನೆಲ್ ಚರ್ಚೆಗಳು ಮತ್ತು ಸಂವಾದಾತ್ಮಕ ಅಧಿವೇಶನಗಳು ನಡೆಯಿತು.
ಇತರೆ ಅಂಗ ಸಂಸ್ಥೆಗಳ ಫಾರ್ಮಸಿ ಕಾಲೇಜುಗಳ ಪ್ರಾಂಶುಪಾಲರು ಸೇರಿದಂತೆ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಂಟ ಏಕೀಕರಣಕ್ಕೆ ಬಲವಾದ ಸಂಸ್ಥಾತ್ಮಕ ಬೆಂಬಲವನ್ನು ಪ್ರದರ್ಶಿಸಿದರು.
ಜೆಎಸ್‍ಎಸ್ ಫಾರ್ಮಸಿ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮವು ಉತ್ತಮ ರೋಗಿ ಆರೈಕೆಗೆ ಜವಾಬ್ದಾರಿಯುತ ಂಟ ಅನ್ನು ಅಳವಡಿಸಿಕೊಳ್ಳುವ ದೃಢ ಸಂಕಲ್ಪವನ್ನು ಪುನರುಚ್ಚರಿಸಿದ್ದು ಹೆಚ್ಚು ಸುರಕ್ಷಿತ, ಹಸಿರು ಮತ್ತು ಎಲ್ಲರಿಗೂ ಲಭ್ಯವಾಗುವ ಔಷಧ ಅಭಿವೃದ್ಧಿಗೆ ಬದ್ಧವಾಗಿದೆ. ಜೊತೆಗೆ ಫಾರ್ಮಾಸಿಸ್ಟ್‍ಗಳು, ವಿಜ್ಞಾನಿಗಳು, ವೈದ್ಯರು ಮತ್ತು ಭವಿಷ್ಯದ ವೃತ್ತಿಪರರನ್ನು ನೈತಿಕ ಂಟ-ಸಹಾಯಕ ಆರೋಗ್ಯ ಭವಿಷ್ಯಕ್ಕೆ ಸಜ್ಜುಗೊಳಿಸುವತ್ತ ಮುಂದಾಗಿದೆ.



























