ಒಂದು ಸರ್ಕಾರ ಮಾಡುವ ಕೆಲಸವನ್ನು ಡಾ.ವೀರೇಂದ್ರ ಹೆಗ್ಗಡೆ ಮಾಡಿದ್ದಾರೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.26-
ಒಂದು ಸರ್ಕಾರ ಮಾಡುವ ಕೆಲಸವನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ಮಾಡಿದ್ದಾರೆ ಎಂದು ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ತಿಳಿಸಿದರು.


ತಾಲೂಕಿನ ದೊಡ್ಡಮೋಳೆಯಲ್ಲಿ ಗ್ರಾಮ ಪಂಚಾಯತಿ ಕಚೇರಿಯ ಮುಂಭಾಗದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಟ್ರಸ್ಟ್, ರೋಟರಿ ಸಂಸ್ಥೆ ಚಾಮರಾಜನಗರ, ನಾರಾಯಣ ಹೃದಯಾಲಯ ಮೈಸೂರು, ಗ್ರಾಮ ಪಂಚಾಯತಿ ದೊಡ್ಡಮೋಳೆ ಮತ್ತು ಸಮುದಾಯ ಆರೋಗ್ಯ ಕೇಂದ್ರ ಹರದನಹಳ್ಳಿ ಅವರ ಸಂಯುಕ್ತಾಶ್ರಯದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆರವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, . ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಮಹಿಳೆಯನ್ನು ಸಂಘಟನೆ ಮಾಡಿ ಅವರು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಮಾಡಿದ್ದಾರೆ ಗ್ರಾಮೀಣ ಅಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ಯೋಜನೆ ಆಯುರ್ವೇದ ಪ್ರಕೃತಿ ಚಿಕಿತ್ಸೆ ಸಿರಿ ಗ್ರಾಮೋದ್ಯೋಗಿ ಜನಜಾಗೃತಿ ವೇದಿಕೆ ಆರೋಗ್ಯ ಸುರಕ್ಷಾ ಯೋಜನೆಗಳು ಪರಿಸರ ಸಂಬಂಧ ಕಾರ್ಯಕ್ರಮಗಳು ಪ್ರಗತಿ ಬಂದು ರೋಡ್ ಸೆಟ್ ಸಂಸ್ಥೆ ಬಜನಾ ತರಬೇತಿ ವಿಪತ್ತುನಿರ್ವಹಣೆ ತಂಡ ಶಿಕ್ಷಣ ಸಂಸ್ಥೆ ಆಸ್ಪತ್ರೆಗಳು ಸಂಧ್ಯಾ ಸುರಕ್ಷಾ ವಾತ್ಸಲ್ಲ ಮನೆ. ಕೆರೆಯ ಅಭಿವೃದ್ಧಿ ಡೈರಿ ಅಭಿವೃದ್ಧಿ ಈ ರೀತಿ ಹಲವಾರು ಯೋಜನೆಗಳನ್ನ ರಾಷ್ಟ್ರ ಮಟ್ಟಕ್ಕೆ ಕೊಂಡು ಹೋಗಿರುತ್ತಾರೆ ಅವರಿಗೆ ದೇವರು ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಎ.ದಿನೇಶ್ ಮಾತನಾಡಿದರು.
ಯೋಜನಾಧಿಕಾರಿ ಹರೀಶ್ ಕುಮಾರ್ ಶೆಟ್ಟಿ ತಾ.ಪಂ.ಮಾಜಿ ಸದಸ್ಯ ಪುಟ್ಟಸ್ವಾಮಿ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀನಿವಾಸನ್, ರೂಪೇಶ್, ಮಹದೇವಪ್ರಸಾದ್,ಡಾ.ದಿಶಾಂಕ್, ಸಮುದಾಯ ಅಧಿಕಾರಿ ಎನ್.ಮನು, ಯೋಜನೆಯ ಮೇಲ್ವಿಚಾರಕ ಶಶಿಕುಮಾರ್, ಕೃಷಿ ಮೇಲ್ವಿಚಾರಕ ಸುಪ್ರೀತ್, ಸೇವಾಪ್ರತಿನಿಧಿಗಳಾದ ರಾಜೇಶ್ವರಿ,ರತ್ನಮ್ಮ,ರಂಗಮಣಿ, ಪಲ್ಲವಿ ಹಾಜರಿದ್ದರು.