
ಸುಳ್ಯ:ಐವರ್ನಾಡು ಗ್ರಾಮದ ಮುಚ್ಚಿನಡ್ಕ ಮಸೀದಿ ಬಳಿ ಜೆಸಿಬಿ ಮೂಲಕ ನೆಲ ಸಮತಟ್ಟು ಮಾಡಿದ ಸ್ಥಳಕ್ಕೆ ಸುಳ್ಯ ತಹಸೀಲ್ದಾರ್ ಮಂಜುಳಾ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಚ್ಚಿನಡ್ಕ ರಸ್ತೆ ಬದಿಯಲ್ಲಿ ಇತ್ತೀಚೆಗೆ ಗುಡ್ಡವನ್ನು ಜೆಸಿಬಿ ಮೂಲಕ ನೆಲ ಸಮತಟ್ಟು ಗೊಳಿಸಿದ್ದರು. ಇದರಿಂದ ಮಳೆನೀರಿಗೆ ಮಣ್ಣುಕೊಚ್ಚಿಕೊಂಡು ಬಂದು ಡಾಮರು ರಸ್ತೆ ಕೆಸರುಮಯವಾಗಿತ್ತು. ವಾಹನ ಸವಾರರಿಗೆ ತೊಂದರೆಯಾಗಿ ಬೈಕ್ ಸ್ಕಿಡ್ಡಾಗಿ ಬಿದ್ದು ಬೈಕ್ ಸವಾರ ಗಾಯಗೊಂಡ ಘಟನೆಯೂ ನಡೆದಿತ್ತು.
ಈ ಹಿನ್ನಲೆಯಲ್ಲಿ ತಹಸೀಲ್ದಾರ್ ಹಾಗೂ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ರಸ್ತೆ ಬದಿ ಅಪಾಯಕಾರಿ ಮರವಿರುವುದನ್ನು ಕಂಡ ತಹಸಿ ಲ್ದಾರ್ ಅವರು ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾಮ ಆಡಳಿತಾಧಿಕಾರಿ, ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


































