
ಕೆನರಾ ಕೈಗಾರಿಕಾ ಸಂಘದ ವತಿಯಿಂದ ದಿನಾಂಕ ೦೪-೦೭-೨೦೨೫ ರಂದು ಸಿ. ಎನ್. ಶೆಟ್ಟಿ ಕನ್ವೆನ್ಷನ್ ಸಭಾಂಗಣದಲ್ಲಿ ವಿಶೇಷವಾಗಿ ಐಟಿಐ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆವರಣ ನೇಮಕಾತಿ ಮತ್ತು ಶಿಷ್ಯವೃತ್ತಿ ಮೇಳವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಅಧ್ಯಕ್ಷರಾದ ಎನ್. ಅರುಣ್ ಪಡಿಯಾರ್ ಉದ್ಘಾಟಿಸಿದರು. ಸುಮಾರು ೩೫೦ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಿದ್ದು, ಸುಮಾರು ೧೦೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.