ಐಒಸಿ ಸ್ಥಳಾಂತರಿಸದಂತೆ ಯದುವೀರ್ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು: ಆ.14:-
ಮೈಸೂರಿನಲ್ಲಿರುವ ಇಂಡಿಯನ್ ಆಯಿಲ್ ಕಾಪೆರ್Çರೇಷನ್ (ಐಒಸಿ) ಪೆಟ್ರೋಲಿಯಂ ಡಿಪೆÇೀವನ್ನು ಬೆಂಗಳೂರಿಗೆ ಸ್ಥಳಾಂತರಿಸದಂತೆ ಮತ್ತು ಮುಚ್ಚದಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಂಸದ ಯದುವೀರ್ ಮನವಿ ಮಾಡಿದ್ದಾರೆ.


ಮೈಸೂರು ಐಒಸಿ ಡಿಪೆÇೀ ಆರು ದಶಕಗಳಿಗೂ ಹೆಚ್ಚು ಕಾಲ ನಿರಂತರ ಕಾರ್ಯಾಚರಣೆಯಲ್ಲಿದ್ದು, ನಾಲ್ಕು ಜಿಲ್ಲೆಗಳಲ್ಲಿ ನಿರಂತರ ಪೆಟ್ರೋಲಿಯಂ ಪೂರೈಕೆ ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಈ ಪ್ರದೇಶದ ಆರರಿಂದ ಏಳು ಜಿಲ್ಲೆಗಳಿಗೆ ಪರಿಣಾಮಕಾರಿಯಾಗಿ ಪೂರೈಕೆ ಮಾಡುವ ಅಪಾರ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಡಿಪೆÇೀದ ಕಾರ್ಯತಂತ್ರದ ಸ್ಥಳ ಮತ್ತು ದೀರ್ಘಕಾಲೀನ ಕಾರ್ಯಾಚರಣೆಯ ದಕ್ಷತೆ ದಕ್ಷಿಣ ಕರ್ನಾಟಕದ ಪೆಟ್ರೋಲಿಯಂ ಪೂರೈಕೆ ಮೂಲಸೌಕರ್ಯದ ಅನಿವಾರ್ಯ ಭಾಗವಾಗಿದೆ.


ಇದರ ಪ್ರಾದೇಶಿಕ ಪ್ರಾಮುಖ್ಯತೆ ಮತ್ತು ಅದರ ಸ್ಥಳಾಂತರದಿಂದ ಉಂಟಾಗಬಹುದಾದ ಅನಾನುಕೂಲತೆ ಮತ್ತು ಅಡ್ಡಿಗಳನ್ನು ಪರಿಗಣಿಸಿ, ಮೈಸೂರಿನಲ್ಲಿರುವ ಐಒಸಿ ಡಿಪೆÇೀದ ಕಾರ್ಯಾಚರಣೆ ಉಳಿಸಿಕೊಂಡು ಇಲ್ಲೇ ಮುಂದುವರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಂಸದ ಯದುವೀರ್ ಮನವಿ ಮಾಡಿದ್ದಾರೆ.