Home ಜಿಲ್ಲೆ ಏ.20 ರಂದು ಬಸವೇಶ್ವರ ಜಯಂತಿ

ಏ.20 ರಂದು ಬಸವೇಶ್ವರ ಜಯಂತಿ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.07: ನಗರದಲ್ಲಿ ಏ.20 ರಂದು ಸಾಂಸ್ಕತಿಕ ನಾಯಕ ಬಸವೇಶ್ವರ ಅವರ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲು ಇಂದು ಹೊಸ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ನಿರ್ಣಯಿಸಲಾಯ್ತು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದೆ. ನಂತರ ಸಂಜೆ 5 ಗಂಟೆಗೆ ಮುನಿಷಿಪಲ್ ಹೈಸ್ಕೂಲ್ ಮೈದಾನದಿಂದ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ. ತೇರು ಬೀದಿ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ 7 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಬಸವ ಜಯಂತಿ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ಸೂಚಿಸಲಾಯ್ತು.

ವಿಶೇಷ ಆಹ್ವಾನಿತರಾಗಿ ಕೊಟ್ಟೂರು ಸಂಸ್ಥಾನ ಮಠದ ಶ್ರೀಗಳನ್ನು ಆಹ್ವಾನ ಮಾಡಲು. ಬಸವಣ್ಣನವರ ಕುರಿತು ಉಪನ್ಯಾಸ, ವಚನಗಾಯನ ಸಂಗೀತ ಕಾರ್ಯಕ್ರಮ ಇರಲಿದೆ.

ಮೆರವಣಿಗೆಗೆ ಸರ್ಕಾರದ ಅಭಿವೃದ್ಧಿ ಕುರಿತಾದ ಸ್ಥಬ್ದ ಚಿತ್ರಗಳನ್ನು ಆಯೋಜಿಸಲು ಸೂಚಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ವೀರಶೈವ ಸಮುದಾಯದ ಮುಖಂಡರಾದ ಡಾ.ಎಸ್.ಜೆ.ವಿ.ಮಹಿಪಾಲ್, ಜಾನೆಕುಂಟೆ ನೇಪಾಕ್ಷಪ್ಪ, ಬಸವದಳದ ರವಿಶಂಕರ್, ವೀರಶೈವ ಲಿಂಗಾಯತ ಸಮಾಜದ ಎಂ.ಚಂದ್ರಮೌಳಿ,

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಡಿ.ಅರುಣ್ , ಗೋನಾಳ್ ನಾಗಭೂಷಣಗೌಡ, ಮದಿರೆ ಕುಮಾರಸ್ವಾಮಿ, ಅಂಗಡಿ ಶಂಕರ್, ಮಂಜುನಾಥ ಕೇಣಿ ಬಸವರಾಜ್, ಮೊದಲಾದವರು ಪಾಲ್ಗೊಂಡಿದ್ದರು.