ಸುಳ್ಯ:ಸುಳ್ಯದ ಯುವ ಪ್ರತಿಭಾನ್ವಿತ ಕ್ರೀಡಾಪಟು ನಿಹಾಲ್ ಕಮಾಲ್ ಅಜ್ಜಾವರ ಅವರನ್ನು ಅ. ೨೨ ರಿಂದ ೩೧ ರವರೆಗೆ ಬಹ್ರೇನ್‌ನಲ್ಲಿ ನಡೆಯಲಿರುವ ೩ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಲು ಭಾರತೀಯ ಅಥ್ಲೆಟಿಕ್ಸ್ ತಂಡಕ್ಕೆ ಆಯ್ಕೆ ಯಾಗಿದ್ದಾರೆ.
೧೨ ದಿನಗಳ ಕಾಲ ನಡೆಯುವ ಒಲಿಂಪಿಕ್ ಮಾದರಿ ಕ್ರೀಡಾಕೂಟದಲ್ಲಿ, ೪೫ ಏಷ್ಯನ್ ದೇಶಗಳಿಂದ ೮೦೦೦ ಯುವ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ೧೦೦ ಮೀ ಓಟ ಮತ್ತು ೧೦೦೦ ಮೀ ಮೆಡ್ಲೆ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಲು ನಿಹಾಲ್ ಕಮಾಲ್ ಅವರನ್ನು ಆಯ್ಕೆ ಮಾಡಿದೆ.
ಈ ಬಾರಿಯ ಏಷ್ಯನ್ ಯೂತ್ ಗೇಮ್ಸ್‌ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ನಿಹಾಲ್ ಕಮಾಲ್. ಕುವೈತ್‌ನ ದೆಹಲಿ ಪಬ್ಲಿಕ್ ಶಾಲೆಯ ೧೨ ನೇ ತರಗತಿಯ ವಿದ್ಯಾರ್ಥಿ ನಿಹಾಲ್, ಭಾರತ ಮತ್ತು ಕುವೈತ್‌ನಲ್ಲಿ ಶಾಲಾ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪ್ರತಿಭೆಯನ್ನು ತೋರಿಸಿದ್ದಾರೆ. ಕುವೈತ್‌ನ ಮೆಕಾನ್ ಕಂಪನಿಯ ಮಾಲಕ ಅಜ್ಜಾವರದ ಮೊಹಮ್ಮದ್ ಕಮಾಲ್ ಮತ್ತು ಕುವೈತ್ ತೈಲ ಕಂಪನಿಯ ಆಡಳಿತ ಸಲಹಕಾರ ರಹೀನಾ ಕಮಾಲ್ ಅವರ ಪುತ್ರ ನಿಹಾಲ್ .

























