ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ ೨೦೨೫ನೇ ಸಾಲಿನ ಸಪ್ಟೆಂಬರ್ ೧೪ ರಿಂದ ೨೧ರವರೆಗೆ ನಡೆಯಲಿರುವ ೨೭ನೇ ಷದ ಭಜನಾ ತರಬೇತಿ ಕಮ್ಮಟದ ೬ನೇ ದಿನದ ಕಾರ್ಯಾಗಾರಕ್ಕೆ ಪೂಜ್ಯ ಹೆಗ್ಗಡೆಯವರು ಭೇಟಿ ನೀಡಿ ಭಜನೆ ಮಾಡುವ ಮುನ್ನ ಮಾನಸಿಕ ತಯಾರಿ ಮತ್ತು ದೈಹಿಕ ಸದೃಢತೆ ಮುಖ್ಯ. ಏಕಾಗ್ರತೆ ಮತ್ತು ಚಿತ್ತ ಮನಸ್ಸಿನಿಂದ ಭಜನೆ ಅಭ್ಯಾಸ ಮಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಭಜಕರಿಗೆ ಶುಭಕೋರಿದರು.
ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದು ಭಜಕರಿಗೆ ಶುಭ ಹಾರೈಸಿದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸ್ರೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.



























